ವಸಾಯಿ: ಶಾಲೆಯಲ್ಲಿ ಶಿಕ್ಷಕರು ನೀಡಿದ ಶಿಕ್ಷೆಯಿಂದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ವಸಾಯಿಯಲ್ಲಿ ನಡೆದಿದೆ. ಶಾಲೆಗೆ ತಡವಾಗಿ ಬಂದಿದ್ದಕ್ಕೆ ವಿದ್ಯಾರ್ಥಿನಿಗೆ 100 ಬಸ್ಕಿ ಹೊಡೆಯುವ ಶಿಕ್ಷೆಯನ್ನು ಶಿಕ್ಷಕರು ನೀಡಿದ್ದರು. ಬಳಿಕ ಆಕೆ ಅಸ್ವಸ್ಥಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾನ್ನಪ್ಪಿದ್ದಾಳೆ. ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ಶಾಲಾ ಆಡಳಿತದಿಂದ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ದಿಲೀಪ್ ತಿಳಿಸಿದ್ದಾರೆ.
ಆಕೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶಾಲಾ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳ ಹೇಳಿಕೆಗಳು ಸೇರಿದಂತೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ, ಪ್ರಕರಣ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಶಿಕ್ಷಕನನ್ನು ಬಂಧಿಸಲಾಗಿದೆ. ಶಲೆಯ ನಿರ್ಲಕ್ಷ್ಯವಿದ್ದರೆ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬಾಲಕಿ ಶಾಲೆಗೆ 10 ನಿಮಿಷ ತಡವಾಗಿ ಬಂದಿದ್ದಕ್ಕಾಗಿ ಇತರ ವಿದ್ಯಾರ್ಥಿಗಳೊಂದಿಗೆ ಈಗೆಗೂ ಬಸ್ಕಿ ಹೊಡೆಯುವಂತೆ ಒತ್ತಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಗೆ ತಲುಪಿದ ನಂತರ ಆಕೆಗೆ ಅಸ್ವಸ್ಥತೆ ಮತ್ತು ಕಾಲಿನಲ್ಲಿ ಊತ ಕಾಣಿಸಿಕೊಂಡಿತು ಮತ್ತು ಅಂತಿಮವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ನವೆಂಬರ್ 13 ರಂದು ಆಕೆಯನ್ನು ಉನ್ನತ ಚಿಕಿತ್ಸೆಗೆಂದು ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತು. ಶಾಲೆಗೆ ತಡವಾಗಿ ಬಂದ ಕಾರಣ ಬಸ್ಕಿಹೊಡೆಯುವ ಶಿಕ್ಷೆಯನ್ನು ಶಿಕ್ಷಕರು ನೀಡಿದ್ದರು ಅದೇ ನ್ನ ಮಗಳ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಕೇವಳ ವಿದ್ಯಾರ್ಥಿನಿಮಾತ್ರವಲ್ಲಆಕೆಯ ಬ್ಯಾಗ್ ಕೂಡ ಬೆನ್ನಿಗೆ ಹಾಕಿಕೊಂಡು ಬಸ್ಕಿ ಹೊಡೆಯುವಂತೆ ಸೂಚಿಸಲಾಗಿತ್ತು.
ಕೆಲವು ವಿದ್ಯಾರ್ಥಿಗು 100, ಕೆಲವರು 50, ಕೆಲವರು 60 ಬಸ್ಕಿ ಹೊಡೆದಿದ್ದರು, ಅದೇ ರೀತಿ ನಮ್ಮ ಮಗಳು ಕೂಡ ಬಸ್ಕಿ ಹೊಡೆದಿದ್ದಳು. ಆಕೆ ಮನೆಗೆ ಬಂದಾಗ ವಿಪರೀತ ಬೆನ್ನು ನೋವೆಂದು ಹೇಳುತ್ತಾ ಮಲಗಿದವಳು ಮೇಲೆ ಏಳಲೇ ಇಲ್ಲ ಎಂದು ವಿದ್ಯಾರ್ಥಿನಿ ತಾಯಿ ಅಳಲು ತೋಡಿಕೊಡಿದ್ದಾರೆ.
For More Updates Join our WhatsApp Group :
