ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿದ್ದು, ಇನ್ನೊಂದಡೆ ಇಂದು ಬಿಜೆಪಿ ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಇದರ ಮಧ್ಯ ಇಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಡೀರ್ ಸಭೆ ನಡೆಸಿದರು.
ರಾಜ್ಯಪಾಲರ ನೋಟಿಸ್ ಮತ್ತು ಬಿಜೆಪಿ ಪಾದಯಾತ್ರೆ ಬೆನ್ನಲ್ಲೇ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ದಿಢೀರ್ ಸಭೆ ನಡೆಸಿದರು. ಮೈಸೂರು ಭಾಗದ ಸಚಿವರು ಮತ್ತು ಶಾಸಕರು ಈ ಒಂದು ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಚಿವರಾದ ಎಚ್ ಸಿ ಮಹದೇವಪ್ಪ, ಹಾಗೂ ಕೆ ವೆಂಕಟೇಶ್ ಭಾಗಿಯಾಗಿದ್ದಾರೆ.
ಅಲ್ಲದೆ ಶಾಸಕರಾದ ರವಿಶಂಕರ್, ಹರೀಶ್ ಗೌಡ, ಅನಿಲ್ ಚಿಕ್ಕಮಾದು, ಎಆರ್ ಕೃಷ್ಣಮೂರ್ತಿ, ಸೇರಿದಂತೆ ಹಲವು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದಾರೆ ಸಿಎಂ ಕಾನೂನು ಕಾರ್ಯದರ್ಶಿ ಮತ್ತು ಶಾಸಕ ಪೊನ್ನಣ್ಣ ಕೂಡ ಉಪಸ್ಥಿತಿ ಇದ್ದಾರೆ. ಸದ್ಯ ಸಿಎಂ ಸಿದ್ದರಾಮಯ್ಯ ದಿಡೀರ್ ಸಭೆಯು ತೀವ್ರ ಕುತೂಹಲ ಕೆರಳಿಸಿದೆ.
ಅಲ್ಲದೆ ಇಂದು ಸಿಎಂ ಸಿದ್ದರಾಮಯ್ಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ, ಮೈಸೂರು ಜಿಲ್ಲೆಯ ನಂಜನಗೂಡು ಬಳಿ ಬೊಕ್ಕಳೆ ಗ್ರಾಮ ಹಾಗೂ ಹಾಸನ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಮಧ್ಯಾಹ್ನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸಲಿದ್ದಾರೆ.