ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಕುಸಿತ , ಸುಧಾಮೂರ್ತಿ ವಿಷಾದ.

ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಸಂಖ್ಯೆ ಕುಸಿತ , ಸುಧಾಮೂರ್ತಿ ವಿಷಾದ.

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಶತಮಾನದ ಶಾಲೆಯಾಗಿರೋ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿದ್ದ ಸುಧಾ ಮೂರ್ತಿಯವರು, ನಾನು ಇದೇ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ 6 ವರ್ಷ ವಿದ್ಯಾಭ್ಯಾಸ ಮಾಡಿದ್ದೇನೆ. ನಾನು ಕಲಿತ ಶಾಲೆಯ ಶಿಥಿಲಾವಸ್ಥೆಯನ್ನು ನೋಡಲು ಸಾಧ್ಯವಾಗದೇ ಇದರ ಅಭಿವೃದ್ಧಿ ಮಾಡಿದ್ದೇನೆ. ನಮ್ಮ ತಾಯಿ, ಅವರ ತಂದೆ ಇಬ್ಬರೂ ಇದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹೀಗಾಗಿ ಈ ಶಾಲೆಗೂ ನನಗೂ ತಲತಲಾಂತರಗಳ ಸಂಬಂಧವಿದೆ ಎಂದರು.

ನಾನು ಈ ಶಾಲೆಯಲ್ಲಿ ಓದುವಾಗ ಕನ್ನಡ ಮಾಧ್ಯಮದಲ್ಲಿ 1400 ರಷ್ಟು ವಿದ್ಯಾರ್ಥಿಗಳಿದ್ದರು. ಆದರೀಗ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳ ಸಂಖ್ಯೆ ಭಾರೀ ಇಳಿತ ಕಂಡಿದೆ. ಹೀಗಾಗಿ ಈ ಶಾಲೆಯನ್ನು ಆಂಗ್ಲ ಮಾಧ್ಯಮವನ್ನಾಗಿಸಬೇಕಾಯಿತು ಎಂದಿದ್ದಾರೆ. ಜಾತಿ ಗಣತಿ ಸಮಯದಲ್ಲಿ ತಮ್ಮ ಜಾತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳದೆ ಇರುವ ವಿಚಾರ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ಸುದ್ದಿಗೋಷ್ಠಿಯಲ್ಲಿ ತಾನು ಈ ಶಾಲೆಯ ವಿಷಯ ಬಿಟ್ಟರೆ ಬೇರೆ ಏನನ್ನೂ ಹೇಳಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *