ಪಾಟ್ನಾ: ಕಳೆದ ಎರಡು ವಾರಗಳಿಂದ ದೇಶದ ಅನೇಕ ರಾಜ್ಯಗಳಲ್ಲಿ ಭಾರಿ ಮಳೆಯಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಬಿಹಾರದ ಕಟಿಹಾರ ಜಿಲ್ಲೆಯೂ ಪ್ರವಾಹದಿಂದ ತತ್ತರಿಸಿದ್ದು, ಮನೆ-ಮಾಲು ಸೇರಿದಂತೆ ಸಾಕಷ್ಟು ಆಸ್ತಿ–ಪಾಸ್ತಿಗೆ ಹಾನಿಯಾಗಿದೆ.
ಈ ನಡುವೆ ಪ್ರವಾಹ ಪೀಡಿತ ಪ್ರದೇಶದ ಸ್ಥಿತಿ ಅವಲೋಕಿಸಲು ತೆರಳಿದ್ದ ಕಾಂಗ್ರೆಸ್ ಸಂಸದ ತಾರೀಖ್ ಅನ್ವರ್ ಅವರ ಅಚ್ಚರಿ ವರ್ತನೆಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 74 ವರ್ಷದ ಅನ್ವರ್ ಅವರು ಹಳ್ಳಿಯ ಜನರೊಬ್ಬರ ಹೆಗಲ ಮೇಲೇರಿ ನೀರಿನಲ್ಲಿ ಸಾಗುತ್ತಿರುವ ದೃಶ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದು ನಿಮಿಷ 12 ಸೆಕೆಂಡುಗಳ ವಿಡಿಯೋದಲ್ಲಿ, ಅಲ್ಲಿ ನೀರಿನ ಮಟ್ಟ ಹೆಚ್ಚು ಇರದೇ ಕೆಸರು ಮಿಶ್ರಿತ ನೀರು ಮಾತ್ರ ಇದ್ದರೂ, ಸಂಸದರು ಹಳ್ಳಿಯವರ ಹೆಗಲ ಮೇಲೇರಿರುವುದು ಜನರನ್ನು ಕೋಪಗೊಳಿಸಿದೆ. “ಇದೇನದು ಸಮೀಕ್ಷೆ?” ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಸದರು ಮೊದಲು ಟ್ರ್ಯಾಕ್ಟರ್ನಲ್ಲಿ ಸ್ವಲ್ಪ ದೂರ ಪ್ರಯಾಣಿಸಿದ ಬಳಿಕ, ಹಳ್ಳಿಯವರ ಸಹಾಯದಿಂದ ಮುಂದೆ ತೆರಳಿದ್ದಾರೆ. ಬಿಹಾರದಲ್ಲಿ ಚುನಾವಣೆ ಸನ್ನಿಹಿತವಾಗಿರುವ ಸಮಯದಲ್ಲಿ ಈ ವಿಡಿಯೋ ರಾಜಕೀಯವಾಗಿ ದೊಡ್ಡ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
For More Updates Join our WhatsApp Group :