ಓಂ ಕಾಳಿನ ಆರೋಗ್ಯ ಪ್ರಯೋಜನ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಅಡುಗೆ ಮನೆಯಲ್ಲಿ ಇದನ್ನು ನಾನಾ ರೀತಿಯ ಭಕ್ಷಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲ. ಇದರಲ್ಲಿ ಔಷಧೀಯ ಗುಣಗಳು ಹೇರಳವಾಗಿದ್ದು ಇದನ್ನು ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಓಂ ಕಾಳು ಮಾತ್ರವಲ್ಲ ಅದನ್ನು ಹಾಕಿ ಕುದಿಸಿದ ನೀರಿನಿಂದಲೂ ಪ್ರಯೋಜನಗಳು ಸಿಗುತ್ತದೆ.
ಓಂ ಕಾಳು ಅಥವಾ ಅಜ್ವೈನ್ ಅಥವಾ ಓಮು ಕಾಳು ಹೀಗೆ ನಾನಾ ಹೆಸರುಗಳಿಂದ ಪ್ರಸಿದ್ದವಾಗಿರುವ ಸುಗಂಧಭರಿತ ಮಸಾಲೆಯಾಗಿದೆ. ಸಾಮಾನ್ಯವಾಗಿ ಇದು ಎಲ್ಲರಿಗೂ ಚಿರಪರಿಚಿತ. ಹಾಗಾಗಿ ಇದರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿರುವುದಿಲ್ಲ. ಇದು ಅಡುಗೆಗೆ ಮಾತ್ರವಲ್ಲ ಇದರಲ್ಲಿನ ಹಲವು ಔಷಧೀಯ ಗುಣಗಳು ಆಯುರ್ವೇದ ಔಷಧ ತಯಾರಿಕೆಯಲ್ಲಿಯೂ ಯಥೇಚ್ಛವಾಗಿ ಬಳಕೆಯಾಗುತ್ತದೆ. ಓಂ ಕಾಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ, ಇದರಲ್ಲಿ ನಿಯಾಸಿನ್, ಥಯಾಮಿನ್, ಸೋಡಿಯಂ, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಉತ್ತಮ ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಪ್ರೋಟೀನ್ ಅಂಶಗಳಿವೆ. ಹಾಗಾಗಿ ಇದರ ನೀರಿನ ಸೇವನೆ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಇದು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ? ಯಾರಿಗೆ ಒಳ್ಳೆಯದು ಹೀಗೆ ಈ ಬಗೆಗಿನ ಮತ್ತಷ್ಟು ಮಾಹಿತಿಯನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
- ವಾಮ್ ಕಾಳು ಅಥವಾ ಓಂ ಕಾಳು ಹೇರಳವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದ್ದು, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ.
- ಶೀತ, ಕೆಮ್ಮು ಮತ್ತು ಕಫದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ನಿಯಮಿತವಾಗಿ ಓಂ ಕಾಳಿನ ನೀರನ್ನು ಕುಡಿಯುವುದರಿಂದ ಪರಿಹಾರ ಕಂಡುಕೊಳ್ಳಬಹುದು.
- ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ಓಂ ಕಾಳು ಪುಡಿಯನ್ನು ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ದೂರವಾಗುತ್ತವೆ.
- ಈ ಓಂ ಕಾಳು ನೀರು ಹೊಟ್ಟೆ ಉಬ್ಬುವುದು, ಗ್ಯಾಸ್ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ.
- ಓಂ ಕಾಳು ಪುಡಿಯನ್ನು ಅರ್ಧ ಕಪ್ ನೀರಿನಲ್ಲಿ ಒಂದು ಕಪ್ ಆಗುವ ವರೆಗೆ ಕುದಿಸಿ. ನಿಯಮಿತವಾಗಿ ಫಿಲ್ಟರ್ ಮಾಡಿ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ.
- ಬೆಚ್ಚಗಿನ ನೀರಿನಲ್ಲಿ ಓಂ ಕಾಳಿನ ಪುಡಿಯ ಮಿಶ್ರಣವನ್ನು ಬೆರೆಸಿ ಕುಡಿಯುವುದರಿಂದ ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ವಾಕರಿಕೆ ಮತ್ತು ಹೊಟ್ಟೆ ನೋವು ನಿವಾರಣೆಯಾಗುತ್ತದೆ.
- ಓಂ ಕಾಳಿನ ನೀರು ಹೊಟ್ಟೆ ಉಬ್ಬುವಿಕೆಯನ್ನು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ನಿಯಮಿತವಾಗಿ ಈ ನೀರಿನ ಸೇವನೆ ಮಾಡುವುದರಿಂದ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಓಂ ಕಾಳಿನ ಪುಡಿ ಲಭ್ಯವಿಲ್ಲದ ಸಂದರ್ಭದಲ್ಲಿ ಓಂ ಕಾಳನ್ನು ನೇರವಾಗಿ ಸೇವನೆ ಮಾಡಬಹುದು.
- ಓಂ ಕಾಳನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಶೇಖರಿಸಿಟ್ಟುಕೊಂಡಲ್ಲಿ, ಹಲ್ಲುನೋವು ಬಂದಾಗ ಅರ್ಧ ಚಮಚ ಓಂ ಕಾಳಿನ ಪುಡಿಗೆ ಸ್ವಲ್ಪ ಆಲಿವ್ ಎಣ್ಣೆ ಮತ್ತು ಬೆಚ್ಚಗಿನ ನೀರಿಗೆ ಅದನ್ನು ಬೆರೆಸಿ ಸೇವನೆ ಮಾಡುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಬಾಯಿಯ ದುರ್ವಾಸನೆಯೂ ಕೂಡ ನಿವಾರಣೆಯಾಗುತ್ತದೆ.
For More Updates Join our WhatsApp Group :
