ನೇಪಾಳ: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಲಿದ್ದಾರೆ ಎಂದು ಜನರಲ್ ಝಡ್ ಪ್ರತಿಭಟನಾ ಸಂಘಟನೆ ಅಧಿಕೃತವಾಗಿ ಘೋಷಿಸಿದೆ. ಮುಂದಿನ 6 ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಇತ್ತೀಚೆಗೆ ನೇಪಾಳದಲ್ಲಿ ಯುವಕರ ನೇತೃತ್ವದಲ್ಲಿ ನಡೆದ ವ್ಯಾಪಕ ಪ್ರತಿಭಟನೆಗಳು ರಾಜಕೀಯ ಬದಲಾವಣೆಗೆ ಕಾರಣವಾಗಿವೆ. ಸರ್ಕಾರ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ ಮತ್ತು ಎಕ್ಸ್ ಸೇರಿದಂತೆ 26 ಪ್ಲಾಟ್‌ಫಾರ್ಮ್‌ಗಳನ್ನು ನಿಷೇಧಿಸಿದ್ದರಿಂದ ಪ್ರತಿಭಟನೆಗಳು ಪ್ರಾರಂಭವಾಗಿ ಭ್ರಷ್ಟಾಚಾರ ವಿರೋಧಿ ಚಳುವಳಿಯಾಗಿ ವಿಸ್ತರಿಸಿತು.
ಪ್ರತಿಭಟನೆಯಲ್ಲಿ ಸಾವಿನ ಸಂಖ್ಯೆ 31ಕ್ಕೆ ಏರಿಕೆ ಕಂಡಿದ್ದು, ಇನ್ನೂ ಕೆಲವರ ಗುರುತು ಪತ್ತೆಯಾಗಿಲ್ಲ ಎಂದು ತ್ರಿಭುವನ್ ವಿಶ್ವವಿದ್ಯಾಲಯದ ಆಸ್ಪತ್ರೆ ತಿಳಿಸಿದೆ.ಪ್ರತಿಭಟನಾಕಾರರು ಹಲವು ಸರ್ಕಾರಿ ಕಟ್ಟಡಗಳು ಹಾಗೂ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ, ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಲು
ಇದೀಗ ಸುಶೀಲಾ ಕರ್ಕಿ ನೇತೃತ್ವದ ಮಧ್ಯಂತರ ಸರ್ಕಾರ ಚುನಾವಣೆಗಳ ಸಿದ್ಧತೆ ನಡೆಸುತ್ತಿದೆ. ಯುವಕರ ನಿರೀಕ್ಷೆಗಳಿಗೆ ತಕ್ಕ ಹೊಸ ರಾಜಕೀಯ ಅಧ್ಯಾಯ ಆರಂಭವಾಗಲಿದೆ ಎಂಬ ಭರವಸೆ ಮೂಡಿದೆ.
For More Updates Join our WhatsApp Group :
