ಮುಂಬೈ: 2026ರ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಬಿಡುಗಡೆ ಮಾಡಿದ್ದು, ಜಂಟಿ ಆತಿಥ್ಯ ವಹಿಸಿರುವ ಭಾರತ–ಶ್ರೀಲಂಕಾ ದೇಶಗಳಲ್ಲಿ ಟೂರ್ನಿ ಫೆಬ್ರವರಿ 7ರಿಂದ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ‘ಎ’ ಗುಂಪಿನಲ್ಲಿ ಜಾಗ ಪಡೆದುಕೊಂಡಿದ್ದು, ಈ ಪರಂಪರಾತ್ಮಕ ಪಂದ್ಯ ಫೆಬ್ರವರಿ 15ರಂದು ಕೊಲಂಬೊನಲ್ಲಿ ನಡೆಯಲಿದೆ.
ಹಾಲಿ ಟಿ20 ಚಾಂಪಿಯನ್ ಭಾರತ ತನ್ನ ಅಭಿಯಾನವನ್ನು ಫೆಬ್ರವರಿ 7ರಂದು ಮುಂಬೈನಲ್ಲಿ ಅಮೆರಿಕ ವಿರುದ್ಧ ಆರಂಭಿಸಲಿದೆ. ನಂತರದ ಪಂದ್ಯಗಳು ಫೆಬ್ರವರಿ 12ರಂದು ದೆಹಲಿಯಲ್ಲಿ ನಮೀಬಿಯಾ ವಿರುದ್ಧ ಮತ್ತು ಫೆಬ್ರವರಿ 18ರಂದು ಅಹಮದಾಬಾದ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆಯಲಿವೆ.
ಟೂರ್ನಿಯ ಉದ್ಘಾಟನಾ ಪಂದ್ಯ ಪಾಕಿಸ್ತಾನ–ನೆದರ್ಲ್ಯಾಂಡ್ಸ್ ನಡುವೆ ಕೊಲಂಬೊನಲ್ಲಿ ಜರುಗಲಿದೆ. ಮೊದಲ ಸೆಮಿಫೈನಲ್ ಕೋಲ್ಕತ್ತಾ ಅಥವಾ ಕೊಲಂಬೊನಲ್ಲಿ, ಎರಡನೇ ಸೆಮೀಸ್ ಮುಂಬೈನಲ್ಲಿ, ಮತ್ತು ಫೈನಲ್ ಅಹಮದಾಬಾದ್ ಅಥವಾ ಕೊಲಂಬೋಗಳಲ್ಲಿ ನಡೆಯಲಿದೆ. ಪಾಕಿಸ್ತಾನ ಫೈನಲ್‌ಗೆ ತಲುಪಿದಲ್ಲಿ ಮಾತ್ರ ಫೈನಲ್ ಲಂಕಾದಲ್ಲಿ ಆಯೋಜಿಸಲಾಗುತ್ತದೆ.
ಈ ಬಾರಿ ಒಟ್ಟು 20 ತಂಡಗಳು 55 ಪಂದ್ಯಗಳಲ್ಲಿ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ. ಇಟಲಿ ತಂಡ ಇದೇ ಮೊದಲ ಬಾರಿ ಟಿ20 ವಿಶ್ವಕಪ್ ಪ್ರವೇಶಿಸುತ್ತಿದೆ. ಭಾರತ, ಪಾಕಿಸ್ತಾನ, ಅಮೆರಿಕ, ನೆದರ್ಲ್ಯಾಂಡ್ಸ್, ನಮೀಬಿಯಾ ‘ಎ’ ಗುಂಪುಗಳಲ್ಲಿವೆ.
ಪಂದ್ಯಗಳಿಗೆ ಭಾರತದಲ್ಲಿನ ದೆಹಲಿ, ಅಹಮದಾಬಾದ್, ಮುಂಬೈ, ಚೆನ್ನೈ, ಕೋಲ್ಕತ್ತಾ ಮೈದಾನಗಳನ್ನು ಮತ್ತು ಲಂಕೆಯ ಕೊಲಂಬೊ, ಎಸ್‌ಎಸ್‌ಸಿ, ಪಲ್ಲೆಕೆಲೆ ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರು ಈ ಬಾರಿ ಪಂದ್ಯವೂ ಆತಿಥ್ಯ ವಹಿಸಿಲ್ಲ.
2026ರ ಟಿ20 ವಿಶ್ವಕಪ್ಗೆ ಭಾರತ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ರಾಯಭಾರಿಯಾಗಿ ನೇಮಕಗೊಂಡಿದ್ದು, 2024ರಲ್ಲಿ ತಂಡವನ್ನು ವಿಶ್ವಚಾಂಪಿಯನ್ ಮಾಡಿದ್ದಕ್ಕಾಗಿ ಅವರಿಗೆ ಗೌರವ ಲಭಿಸಿದೆ.
For More Updates Join our WhatsApp Group :




