ಬಸ್ ಇಲ್ಲದ ಬಿಸಿ ಜನರ ಜೇಬಿಗೆ ಹೊಡೆತ : ದಿಢೀರ್ ಆಟೋ ದರ ಏರಿಕೆ || KSRTC Strike Impact

ಇಂದಿನಿಂದ ಸಾರಿಗೆ ನೌಕರರು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹೈಕೋರ್ಟ್​​ ಒಂದು ದಿನದ ತಡೆಯಾಜ್ಞೆ ನಡುವೆಯೂ ಬಸ್​​ಗಳ ಸಂಚಾರದಲ್ಲಿ ಕೆಲ ಗೊಂದಲ ಇದ್ದು, ಸಂಪೂರ್ಣ ಬಸ್​ಗಳು ರಸ್ತೆಗಿಳಿದಿಲ್ಲ.  ಹೀಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಆಟೋ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ದಿಢೀರ್​ ಆಟೋ ದರ ಏರಿಕೆ ಮಾಡಿ, ಒಬ್ಬ ಪ್ರಯಾಣಿಕನಿದ್ದರೂ ಕೂಡ 300 ರೂ, 400 ರೂಗಳನ್ನು ವಸೂಲಿ ಮಾಡುತ್ತಿದ್ದಾರೆ. ಶಾಂತಿನಗರದಿಂದ ಜೀವನ್ ಭೀಮಾನಗರಕ್ಕೆ ತೆರಳಲು ಆಟೋ ಚಾಲಕರೊಬ್ಬರು ಒಬ್ಬ ಸಿಂಗಲ್ ಪ್ರಯಾಣಿಕನಿಂದ 350 ರೂಪಾಯಿಗಳನ್ನು ಡಿಮಾಂಡ್ ಮಾಡಿದ ಘಟನೆಯೊಂದು ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸಿದೆ. ಕೊನೆಗೆ, ಚರ್ಚೆಯ ಬಳಿಕ 250 ರೂಪಾಯಿಗಳಿಗೆ ಒಪ್ಪಿಕೊಂಡ ಚಾಲಕ, ಪ್ರಯಾಣಿಕನನ್ನು ಕರೆದೊಯ್ದಿದ್ದಾರೆ. ಇಲ್ಲಿ ಪ್ರಯಾಣಿಕ ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ್ದವರಾಗಿದ್ದು, ಸಾರಿಗೆ ಬಸ್‌ಗಳ ಸೇವೆ ಇಲ್ಲದಿರುವುದರಿಂದ ಆಟೋವನ್ನೇ ಆಶ್ರಯಿಸಬೇಕಾಗಿದೆ. ಆಟೋ ಚಾಲಕನು ದರ ಕೇಳಿದಾಗ ಪ್ರಯಾಣಿಕನಿಗೆ ಶಾಕ್​ ಆಗಿದ್ದು, ಕೊನೆಗೆ 250 ರೂಪಾಯಿಗಳನ್ನು ಪಾವತಿಸಿ ಪ್ರಯಾಣಿಸಿದ್ದಾರೆ. ಸಾಮಾನ್ಯವಾಗಿ, ಶಾಂತಿನಗರದಿಂದ ಜೀವನ್ ಭೀಮಾನಗರಕ್ಕೆ ಆಟೋ ದರ ಸುಮಾರು 100-150 ರೂಪಾಯಿಗಳಷ್ಟಿರುತ್ತದೆ. ಆದರೆ, ಮುಷ್ಕರದಿಂದಾಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿರುವುದರಿಂದ ಆಟೋ ಚಾಲಕರು ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ದರವನ್ನು ಗಗನಕ್ಕೇರಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿದಂತೆ ರಾಜ್ಯದ ಸಾರಿಗೆ ಘಟಕಗಳ ಸಿಬ್ಬಂದಿ, 38 ತಿಂಗಳ ವೇತನ ಬಾಕಿ, ವೇತನ ಪರಿಷ್ಕರಣೆ, ಮತ್ತು 2021ರ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ನೌಕರರ ಮರುನೇಮಕಾತಿಗಾಗಿ ಈ ಹೋರಾಟಕ್ಕೆ ಕರೆ ನೀಡಿದ್ದಾರೆ. ಇದರಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಉಂಟಾಗಿದ್ದು, ವಿಶೇಷವಾಗಿ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಪಡೆಯುವ ಮಹಿಳೆಯರಿಗೆ ತೊಂದರೆಯಾಗಿದೆ.

ಬೆಂಗಳೂರು || ಇಂದಿನಿಂದ ಹೊಸ 15% ದರ ಏರಿಕೆ ಜಾರಿ: GST ಸಹ ಅನ್ವಯ, ಟಿಕೆಟ್ ದರಪಟ್ಟಿ

ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುವ ನಾಲ್ಕು ಸಾರಿಗೆ ನಿಗಮಗಳ ಬಹುದಿನಗಳ ಬೇಡಿಕೆ ಈಡೇರಿಕೆ ಆಗಿದೆ. ಬಸ್ ದರ ಶೇಕಡಾ 15ರಷ್ಟು ಹೆಚ್ಚಳವು…

ಬೆಂಗಳೂರು || ಕೆಎಸ್ಆರ್‌ಟಿಸಿ ಒಂಟಿ ಪುರುಷ ಉದ್ಯೋಗಿಗಳಿಗೆ 180 ದಿನ-ಶಿಶುಪಾಲನಾ ರಜೆ

ಬೆಂಗಳೂರು: ಕೆಎಸ್ಆರ್‌ಟಿಸಿಯಲ್ಲಿ ಕೆಲಸ ಮಾಡುವ ಒಂಟಿ ಪುರುಷ ಉದ್ಯೋಗಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುರುಷ ಉದ್ಯೋಗಿಗಳಿಗೆ 180 ದಿನಗಳ ಶಿಶುಪಾಲನಾ…

ಬೆಂಗಳೂರು || ಬಸ್ ಟಿಕೆಟ್ ದರ ಏರಿಕೆ ವಿರುದ್ಧ ಕನ್ನಡಿಗರು ದಂಗೆ ಏಳ್ತಾರೆ: ಆರ್.ಅಶೋಕ್

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ನಾಲ್ಕು ಸಾರಿಗೆ ನಿಗಮಗಳ ಬಸ್ ದರ ಏರಿಕೆಗೆ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ನಿಗಮನ ಗಳ ಬಹುದಿನದ ಬೇಡಿಕೆ ಈಡೇರಿಕೆಗೆ ಗ್ರೀನ್…

ಸಂಕ್ರಾOತಿ ಹಬ್ಬದ ನಂತರ ಕೆಎಸ್ಆರ್‌ಟಿಸಿ, ಬಿಎಂಟಿಸಿ ಇಂದ ಜನತೆಗೆ ಶಾಕ್

KSRTC, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸಾರಿಗೆ ಮುಖಂಡರು ಸಂಕ್ರಾOತಿ ನಂತರ ಸಿಎಂ ಜೊತೆಗೆ ನಡೆಯಲಿರುವ ಸಭೆಯಲ್ಲಿ, ಟಿಕೆಟ್ ಏರಿಕೆಗೆ ಗ್ರೀನ್…

ತುಮಕೂರು || ಚಾಲಕನಿಗೆ ಪಿಟ್ಸ್, ಭೀಕರ ಅಪಘಾತ..ಮುಂದೇನಾಯ್ತು…!

ತುಮಕೂರು:- ಮಡಕಶಿರಾ ಪಟ್ಟಣದ ಮಾರುತಿ ನಗರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ 25 ನೇ ತಾರೀಕಿನಂದು ಭೀಕರ ಅಪಘಾತ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಭಾನುವಾರ…

ಕರ್ನಾಟಕ: ಪ್ರೀಮಿಯಂ ಪ್ರಯಾಣಕ್ಕಾಗಿ 20 ಹೊಸ ಐಷಾರಾಮಿ ಅಂಬಾರಿ ಉತ್ಸವ ಬಸ್‌ಗಳೊಂದಿಗೆ KSRTC ವಿಸ್ತರಣೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಫ್ಲೀಟ್‌ಗೆ 20 ಹೊಸ ಅಂಬಾರಿ ಉತ್ಸವ ಐಷಾರಾಮಿ ಬಸ್‌ಗಳನ್ನು ಸೇರಿಸಿದೆ, ಇದು ರಾಜ್ಯದ ಸಾರ್ವಜನಿಕ ಸಾರಿಗೆ ಆಯ್ಕೆಗಳನ್ನು…

ಚಾಮರಾಜನಗರ || 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

ಚಾಮರಾಜನಗರ: ಕೆಎಸ್‌ಆರ್‌ಟಿಸಿ (KSRTC) ಚಾಲಕರ ಹೊರಗುತ್ತಿಗೆ ಹುದ್ದೆಯ ನೇಮಕಾತಿಯಲ್ಲೂ ಕೂಡ ಗೋಲ್ಮಾಲ್ ನಡೆಯುತ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಚಾಲಕನೊಬ್ಬ ಮಾತನಾಡಿರುವ ವೀಡಿಯೋ ವೈರಲ್…

ಹುಬ್ಬಳ್ಳಿ || ಹುಬ್ಬಳ್ಳಿಯಿಂದ ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ವಿಶೇಷ ಬಸ್ ಸೇವೆ

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ನಾಳೆ (ಭಾನುವಾರ) ಹುಣ್ಣಿಮೆಯಂದು ಮತ್ತು ಮುಂಬರುವ ಅಮಾವಾಸ್ಯೆಯವರೆಗೆ ಪ್ರತಿ ಮಂಗಳವಾರ ಹಾಗೂ…

ಮಂಗಳೂರು || KSRTC: ನಾಳೆಯಿಂದ ಮಂಗಳೂರು-ಕಾರ್ಕಳ ಕೆಎಸ್ಸಾರ್ಟಿಸಿ ಪ್ರಾಯೋಗಿಕ ಸಂಚಾರ

ಮಂಗಳೂರು: ಪ್ರಯಾಣಿಕರ ಬೇಡಿಕೆಗೆ ಅನುಗುಣ ವಾಗಿ ಮಂಗಳೂರು- ಕಾರ್ಕಳ ನಡುವೆ ಡಿ.12ರಿಂದ ಪ್ರಾಯೋಗಿಕವಾಗಿ ಬಸ್‌ ಸಂಚಾರ ನಡೆಸಲು ಕೆಎಸ್ಸಾರ್ಟಿಸಿ ತೀರ್ಮಾನಿಸಿದೆ. ರಾಜ್ಯ ಸರಕಾರ ಶಕ್ತಿ ಯೋಜನೆ ಪರಿಚಯಿಸಿದ…