ಬಿಹಾರ ಚುನಾವಣೆಗೂ ಮುನ್ನ ದುರಂತ! JDU ನಾಯಕ ನಿರಂಜನ್ ಕುಶ್ವಾಹ ಕುಟುಂಬದ ಮೂವರು ಶ*ವಾಗಿ ಪತ್ತೆ

ಬಿಹಾರ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ ಒಂದೇ ಒಂದು ದಿನ ಬಾಕಿ ಉಳಿದಿದೆ. ಮಂಗಳವಾರ ರಾತ್ರಿ ಜೆಡಿಯು ನಾಯಕ ನಿರಂಜನ್ ಕುಶ್ವಾಹ ಅವರ ಕುಟುಂಬದ ಮೂವರು ಸದಸ್ಯರು ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಮೃತರನ್ನು ನಿರಂಜನ್ ಅವರ ಹಿರಿಯ ಸಹೋದರ ನವೀನ್ ಕುಶ್ವಾಹ, ಅವರ ಪತ್ನಿ ಕಾಂಚನ್ ಮಾಲಾ ಸಿಂಗ್ ಮತ್ತು ಅವರ ಮಗಳು ತನು ಪ್ರಿಯಾ ಎಂದು ಗುರುತಿಸಲಾಗಿದೆ…