ಬಾಲಕಿಯನ್ನು ಹಿಂಬಾಲಿಸಿ ಲೈಬ್ರರಿ ಬಳಿ ಗುಂಡು ಹಾರಿಸಿದ ಯುವಕ – ಫರೀದಾಬಾದ್‌ನಲ್ಲಿ ಘಟನೆ.

ಫರೀದಾಬಾದ್: ವ್ಯಕ್ತಿಯೊಬ್ಬ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ರಸ್ತೆಯಲ್ಲಿ ಆಕೆಗೆ ಗುಂಡು ಹಾರಿಸಿರುವ ಘಟನೆ ಫರೀದಾಬಾದ್​ನಲ್ಲಿ ನಡೆದಿದೆ. ಆತ ಹಲವು ದಿನಗಳಿಂದ 17 ವರ್ಷದ ಬಾಲಕಿ ಮೇಲೆ ಕಣ್ಣಿರಿಸಿದ್ದ, ಆಕೆಯನ್ನು ಪದೇ ಪದೇ ಹಿಂಬಾಲಿಸುತ್ತಿದ್ದ.  ಬಾಲಕಿ ಹಾಗೂ ಆರೋಪಿ ಯಾವಾಗಲೂ ಹೋಗುತ್ತಿದ್ದ ಲೈಬ್ರರಿ ಹೊರಗೆ ಈ ಘಟನೆ ನಡೆಸಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಗೆ ಬಾಲಕಿಯ ದಿನಚರಿ ತಿಳಿದಿತ್ತು. ಆಕೆ ಬರುತ್ತಾಳೆಂದು ಆತ ಮೊದಲೇ ಬಂದು ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆದ ಸ್ವಲ್ಪ ಸಮಯದ ಬಳಿಕ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಲಕಿ ಬರುವ ಮೊದಲೇ ಆತ ಬಂದು ಕಾಯುತ್ತಿರುವುದನ್ನು ತೋರಿಸುತ್ತದೆ. ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿಯು ಬಾಲಕಿಯ ಚಲನವಲನಗಳನ್ನು ಗಮನಿಸುತ್ತಿದ್ದ ಆಕೆ ಗ್ರಂಥಾಲಯಕ್ಕೆ ಹೋಗುವ ಮತ್ತು ಬರುವ ಮಾರ್ಗದ ಬಗ್ಗೆ ಮೊದಲೇ ತಿಳಿದಿದ್ದ ಎನ್ನಲಾಗಿದೆ. ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ, ಹಲ್ಲೆಕೋರನನ್ನು ಗುರುತಿಸಿದ್ದು, ಆತ ಮೊದಲೇ ತನಗೆ ಕಿರುಕುಳ ಕೊಟ್ಟಿದ್ದ ಹಾಗಾಗಿ ಆತನನ್ನ ಮರೆಯಲು ಸಾಧ್ಯವೇ ಇಲ್ಲ ಎಂದು ಆಕೆ ಹೇಳಿದ್ದಾಳೆ. ಆತ ತನಗೆ ಗೊತ್ತು, ಬಹಳ ಸಮಯದಿಂದ ತನಗೆ ತೊಂದರೆ ನೀಡುತ್ತಿದ್ದ ಎಂದು ಮಾಹಿತಿ ನೀಡಿದ್ದಾಳೆ. ಬಾಲಕಿಯ ಮೇಲೆ ಗುಂಡು ಹಾರಿಸಿದ ನಂತರ, ಆರೋಪಿಯು ಆಯುಧವನ್ನು ಸ್ಥಳದಲ್ಲಿ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ದಾಳಿಯ ಸ್ವಲ್ಪ ಸಮಯದ ನಂತರ ಅಧಿಕಾರಿಗಳು…