ಕಾಫಿ ಬೆಳೆಗಾರರ ಕಣ್ಣೀರು: ಯುದ್ಧದಿಂದ ರಫ್ತು ಸ್ಥಗಿತ.

ಕಾಫಿ ಬೆಳೆಗಾರರ ಕಣ್ಣೀರು: ಯುದ್ಧದಿಂದ ರಫ್ತು ಸ್ಥಗಿತ.

ಇಸ್ರೇಲ್-ಇರಾನ್ ಯುದ್ಧದ ಹೊಡೆತ ಕರ್ನಾಟಕ ಕಾಫಿ ತೋಟಗಳ ಮೇಲೆ.

ಹಾಸನ: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳು ಈಗ ಕರ್ನಾಟಕದ ಕಾಫಿ ತೋಟಗಳಿಗೂ ತಟ್ಟಿವೆ. ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ಕೊರತೆಯ ನಡುವೆ, ದೇಶಕ್ಕೆ ಅತಿ ಹೆಚ್ಚು ವಿದೇಶಿ ವಿನಿಮಯ ತಂದುಕೊಡುತ್ತಿದ್ದ ಕಾಫಿ ಉದ್ಯಮ ಈಗ ಸಂಕಷ್ಟದ ಸುಳಿಗೆ ಸಿಲುಕಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಕದನದಿಂದಾಗಿ ಕಾಫಿ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಕಾಫಿ ಬೆಲೆ ತೀವ್ರವಾಗಿ ಕುಸಿಯುತ್ತಿದೆ.

ಕಾಫಿ ದರ ವಿವರ

  • ಅರೇಬಿಕಾ ಕಾಫಿ: ಕಳೆದ ವರ್ಷ 50 ಕೆಜಿ ಚೀಲಕ್ಕೆ 29 ಸಾವಿರ ರೂ. ಇದ್ದ ಬೆಲೆ ಈಗ 23 ಸಾವಿರಕ್ಕೆ ಕುಸಿದಿದೆ. ರೊಬಸ್ಟಾ ಕಾಫಿ: 12 ಸಾವಿರ ರೂ. ಇದ್ದ ಬೆಲೆ ಈಗ ಕೇವಲ 8 ಸಾವಿರಕ್ಕೆ ಇಳಿಕೆಯಾಗಿದೆ.
  • ಗಾಯದ ಮೇಲೆ ಬರೆ ಎಳೆದ ವಿದೇಶಿ ಫಸಲು

ಕಾಫಿ ಬೆಳೆಗಾರರ ಆಗ್ರಹವೇನು?

ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 70 ರಷ್ಟಿದೆ. ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಲಕ್ಷಾಂತರ ಕುಟುಂಬಗಳು ಈ ಉದ್ಯಮವನ್ನೇ ನಂಬಿವೆ. ‘ರಫ್ತುದಾರರಿಗೆ ಕೇಂದ್ರ ಸರ್ಕಾರ ಹೇಗೆ ನೆರವಿನ ಹಸ್ತ ನೀಡುತ್ತದೆಯೋ, ಅದೇ ಮಾದರಿಯಲ್ಲಿ ಕಾಫಿ ಬೆಳೆಗಾರರಿಗೂ ವಿಶೇಷ ಪರಿಹಾರ ಘೋಷಿಸಬೇಕು’ ಎಂದು ಅಂತರಾಷ್ಟ್ರೀಯ ಕಾಫಿ ಸಂಘಟನೆ ಸಲಹಾ ಸಮಿತಿ ಸದಸ್ಯರಾದ ಡಾ. ಎಚ್ ಡಿ ಮೋಹನ್ ಕುಮಾರ್ ಆಗ್ರಹಿಸಿದ್ದಾರೆ.

ಸದಗಯ ಇರಾನ್-ಅಮೆರಿಕ ಯುದ್ಧಕ್ಕೆ 2 ವಾರಗಳ ಕದನ ವಿರಾಮ ಘೋಷಿಸಲಾಗಿದ್ದು, ಇದು ಮುಂದೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *