ತಲೆ ಮರೆಸಿಕೊಂಡಿದ್ದ ಕುಖ್ಯಾತ ಅಂತಾರಾಜ್ಯ ಮನೆಗಳ್ಳರ ಬಂಧನ..!

ಶಿರಾ : ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಷ್ಟೇ ಅಲ್ಲದೆ ಆಂದ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮನೆಗಳ್ಳತನ ಮಾಡುತ್ತಾ ಕಳೆದ ಐದು ವರ್ಷಗಳಿಂದಲೂ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ಅಂತಾರಾಜ್ಯ ಮನೆಗಳ್ಳರನ್ನು ಬಂಧಿಸುವಲ್ಲಿ ಶಿರಾ ನಗರ ಠಾಣೆ ಪೊಲೀಸರು ಯಶ ಕಂಡಿದ್ದಾರೆ.

ಕಳೆದ ಅಕ್ಟೋಬರ್ 29 ರಂದು ನಗರದಲ್ಲಿ ಹಗಲುಗಳ್ಳತನ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಆರಕ್ಷಕ ಸಿಬ್ಬಂದಿ ಅಬ್ದುಲ್ ಖಲೀಲ್, ಧರ್ಮೇಶ್, ನರೇಂದ್ರ, ಮಣಿಕಂಠ ರವರುಗಳು ಕಾರ್ಯಪ್ರವೃತ್ತರಾಗಿ ಕಳ್ಳತನದ ಆರೋಪಿಗಳ ಮೇಲೆ ದಾಳಿ ನಡೆಸಿದ್ದರು. ಆಗ ಮೂರು ಮಂದಿ ಆರೋಪಿಗಳ ಪೈಕಿ ಓರ್ವ ಆರೋಪಿ ಕಳವಿಗೆ ಬಳಸಲಾಗಿದ್ದ ಕಾರಿನ ಸಮೇತ ಪರಾರಿಯಾಗಿದ್ದನು.

ಯುವಕ

ಉಳಿದ ಇಬ್ಬರು ವ್ಯಕ್ತಿಗಳನ್ನು ಹಿಡಿಯಲು ಪ್ರಯತ್ನಿಸಿದಾಗ ಮಹಮದ್ ಸಾದಿಕ್ ಆಲಿಯಾಸ್ ರಿಯಾನ್ ಎಂಬಾತ ಆರಕ್ಷಕ ಸಿಬ್ಬಂದಿ ಖಲೀಲ್ ಮತ್ತು ಮಣಿಕಂಠ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದಾಗ ಈ ಇಬ್ಬರು ಆರಕ್ಷಕರಿಗೆ ಗಾಯಗಳಾಗಿದ್ದವು. ಆರೋಪಿ ರಿಯಾನ್ ಚಾಕುವಿನಿಂದ ತನ್ನ ಹೊಟ್ಟೆಯನ್ನು ತಾನೇ ಕೊಯ್ದುಕೊಂಡು ಪೊಲೀಸರ ಕೈಗೆ ಸಿಕ್ಕಿದ್ದನು. ಈತನಿಗೆ ಚಿಕಿತ್ಸೆ ಕೊಡಿಸಿ ಪ್ರಕರಣ ದಾಖಲಿಸಲಾಗಿತ್ತು.

ಈ ಸಂಬ0ಧ ಮನೆಗಳ ಹಗಲುಗಳ್ಳರ ಜಾಡು ಹಿಡಿದ ಆರಕ್ಷಕ ಇಲಾಖೆ ಬೃಹತ್ ಜಾಲವನ್ನು ಪತ್ತೆ ಹಚ್ಚಲು ತಯಾರಿ ನಡೆಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ ಮಾಡಿ ತಂಡದಲ್ಲಿ ಶಿರಾ ಉಪ ವಿಭಾಗಾದ ಡಿ.ಎಸ್.ಪಿ. ಬಿ.ಕೆ.ಶೇಖರ್,  ನಗರ ಠಾಣೆಯ ಸಿ.ಪಿ.ಐ. ಮಂಜೇಗೌಡ, ಪಿ.ಎಸ್.ಐ. ಪಾಲಾಕ್ಷ ಪ್ರಭು, ತನಿಖಾ ಸಹಾಯಕರಾಗಿ ಹೆಚ್.ಸಿ. ದುರ್ಗಯ್ಯ, ಇತರೆ ಸಿಬ್ಬಂದಿಗಳಾದ ರಮೇಶ್, ಅಬ್ದುಲ್ ಖಲೀಲ್, ಮಂಜುನಾಥಸ್ವಾಮಿ, ತಿಪ್ಪೇಸ್ವಾಮಿ, ಧರ್ಮಾನಾಯ್ಕ, ಜಿಲ್ಲಾ

ಕಛೇರಿಯ ತಾಂತ್ರಿಕ ವಿಭಾಗದ ನರಸಿಂಹರಾಜು ತಂಡವು ಆರೋಪಿಗಳ ಮಾಹಿತಿ ಕಲೆ ಹಾಕಿದೆ. ಸದರಿ ಆರೋಪಿಗಳು ಮಂಗಳೂರಿನ ಹಿರಿಯಡ್ಕ, ಮೈಸೂರಿನ ಟಿ.ನರಸಿಪುರ, ಗದಗ್, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರುಗಳಲ್ಲಿ ಸುಮಾರು 42 ಮನೆಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಒಟ್ಟಾರೆ ರಾಜ್ಯದ ವಿವಿಧೆಡೆ ಮತ್ತು ಅನ್ಯ ರಾಜ್ಯಗಳಲ್ಲೂ ಮನೆಗಳ್ಳತನ ಮಾಡಿ ಆರಕ್ಷಕ ಇಲಾಖೆಗೆ ಅಗತ್ಯವಾಗಿ ಬೇಕಿದ್ದ ಈ ಕುಖ್ಯಾತ ಕಳ್ಳರ ಜಾಲವನ್ನು ಭೇದಿಸುವಲ್ಲಿ ಶಿರಾ ಪೊಲೀಸರು ಯಶ ಕಂಡಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *