ಮಗನಿಗೆ ಆಸ್ತಿ ಸಿಗದೆ ಕೋರ್ಟ್ ಸೋಲು.

ಮಗನಿಗೆ ಆಸ್ತಿ ಸಿಗದೆ ಕೋರ್ಟ್ ಸೋಲು.

ತಾಯಿ ಬರೆದ ವಿಲ್ ಅನ್ವಯ ಉಳಿದ ಐ ಮಕ್ಕಳಿಗೆ ಮಾತ್ರ ಹಂಚಿಕೆ.

ತಿರುವನಂತಪುರಂ: ಗಂಡನಿಂದ ದಾನವಾಗಿ ಬಂದ ಭೂಮಿಯನ್ನು ಮಹಿಳೆಯೊಬ್ಬರು ತನ್ನ ಆರು ಮಕ್ಕಳಲ್ಲಿ ಐವರಿಗೆ ಮಾತ್ರವೇ ಹಂಚಿಕೆ ಮಾಡಿ ವಿಲ್ ಬರೆದಿದ್ದರು. ಈಗ ಆಸ್ತಿ ಸಿಗದ ಆ ಒಬ್ಬ ಮಗ ಕೋರ್ಟ್ ಮೆಟ್ಟಿಲೇರಿದರು. ಆದರೆ, ನ್ಯಾಯಾಲಯದಲ್ಲಿ ತಾಯಿಯ ಪರವಾಗಿ ತೀರ್ಪು ಬಂದಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ತನಗೆ ಹಕ್ಕಿದೆ ಎನ್ನುವ ಮಗನ ವಾದವನ್ನು ಕೋರ್ಟ್ ಒಪ್ಪಿಲ್ಲ.

ಏನಿದು ಪ್ರಕರಣ?

ವೆಂಕಿಟನ್ ಎಂಬ್ರಾಂದಿರಿ ಎಂಬುವವರು 1925ರಲ್ಲಿ ಒಂದು ಎಕರೆ 26 ಸೆಂಟ್ ಜಮೀನನ್ನು ಖರೀದಿ ಮಾಡುತ್ತಾರೆ. ಅವರಿಗೆ ಇಬ್ಬರು ಹೆಣ್ಮಕ್ಕಳು ಸೇರಿ ಆರು ಮಕ್ಕಳಿದ್ದರು. ಅವರಲ್ಲಿ ಟಿ.ವಿ. ರಾಮಚಂದ್ರ ರಾವ್ ಒಬ್ಬರು.

ವೆಂಕಿಟನ್ ಮೃತಪಟ್ಟಾಗ ಮಕ್ಕಳೆಲ್ಲರೂ 1967ರಲ್ಲಿ ಪಾರ್ಟಿಶನ್ ಡೀಡ್ ಮಾಡಿದರು. ಆಗ ರಾಮಚಂದ್ರ ರಾವ್ ಅವರಿಗೆ 37 ಸೆಂಟ್ ಆಸ್ತಿ ಸಿಕ್ಕಿತು. ರಾಧಮ್ಮ ಎನ್ನುವ ಸಹೋದರಿಯೊಬ್ಬರು ತನ್ನ ಪಾಲಿನ 9 ಸೆಂಟ್ ಜಾಗವನ್ನು ಬಿಟ್ಟುಕೊಡುತ್ತಾರೆ. ಟಿ.ವಿ. ರಾಮಚಂದ್ರರಾವ್ ಅವರಿಗೆ ಸಿಕ್ಕ ಜಾಗ 46 ಸೆಂಟ್​ಗೆ ಏರುತ್ತದೆ.

1978ರಲ್ಲಿ ರಾಮಚಂದ್ರರಾವ್ ಈ 46 ಸೆಂಟ್ ಜಾಗವನ್ನು ತಮ್ಮ ಧರ್ಮಪತ್ನಿಗೆ ದಾನವಾಗಿ ನೀಡುತ್ತಾರೆ. 1986ರಲ್ಲಿ ರಾವ್ ಮೃತರಾಗುತ್ತಾರೆ. ಇವರಿಗೆ ಆರು ಮಕ್ಕಳಿದ್ದಾರೆ. ರಾಮಚಂದ್ರರಾವ್ ನಿಧನರಾಗಿ ಕೆಲ ವರ್ಷಗಳ ಬಳಿಕ ಅವರ ಪತ್ನಿ ವಿಲ್ ಬರೆಯುತ್ತಾರೆ. ಒಬ್ಬ ಮಗನನ್ನು ಬಿಟ್ಟು ಉಳಿದ ಐವರಿಗೆ ಆಸ್ತಿ ಹಂಚಿಕೆ ಮಾಡಿ ವಿಲ್ ಬರೆಯುತ್ತಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *