ಹಾಲು ಹಾಕುವವನಿಂದಲೇ ಡಾಕ್ಟರ್ ಮನೆಗೆ ಕನ್ನ

ದಾವಣಗೆರೆ: ಪ್ರತಿದಿನ ಮನೆಗೆ ಹಾಲು ಹಾಕುವನಿಂದಲೇ ಡಾಕ್ಟರ್ ಮನೆಗೆ ಕನ್ನ ಹಾಕಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ವಿದ್ಯಾನಗರದಲ್ಲಿ ನಿನ್ನೆ (ಜುಲೈ 12 ರಂದು) ನಡೆದಿದೆ.

ನಾವು ಎರಡು ದಿನ ಮನೆಯಲ್ಲಿ ಇರಲ್ಲ ಎಂದು ಹಾಲು ಹಾಕುವವನಿಗೆ ಡಾಕ್ಟರ್ ಹೇಳಿದ್ದರು. ಹಾಲು ಹಾಕುವವನು ತಡ ಮಾಡದೇ, ಡಾಕ್ಟರ್​ ಮನೆ ಕಳ್ಳತನ ಮಾಡಲು ಗುಂಪು ಕಟ್ಟಿಕೊಂಡಿದ್ದನು. ಹಾಲು ಮಾರುವನು ಸೇರಿದಂತೆ ನಾಲ್ವರ ಗ್ಯಾಂಗ್ ವೈದ್ಯರ ಮನೆಗೆ ಕನ್ನ ಹಾಕಿ ಬರೋಬ್ಬರಿ ₹32. 85 ಲಕ್ಷ ಮೊತ್ತದ ಚಿನ್ನಾಭರಣ ದೋಚಿದ್ದರು. ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

ವೈದ್ಯರಾದ ಡಾ.‌ಸಚಿನ್ ಬೊಂಗಾಳೆ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ 434 ಗ್ರಾಂ ಬಂಗಾರ, 500 ಗ್ರಾಂ ಬೆಳ್ಳಿ ಆಭರಣ, 25 ಸಾವಿರ ನಗದು, ಆ್ಯಪಲ್ ಫೋನ್, ಸ್ಮಾರ್ಟ್ ವಾಚ್ ಎಲ್ಲವುದನ್ನು ಕಳ್ಳರು ದೋಚಿದ್ದಾರೆ. ಡಾ.ಸಚಿನ್ ಬೊಂಗಳೆ ಅವರು ಹರಿಹರ ನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು.

ಪ್ರಕರಣ ದಾಖಲು ಮಾಡಿಕೊಂಡ ಹರಿಹರ ನಗರ ಠಾಣೆಯ ಪೊಲೀಸರು ಖದೀಮರ ಹೆಡೆಮುರಿ ಕಟ್ಟಲು ತನಿಖೆಗೆ ಇಳಿದಿದ್ದರು. ಕೊನೆಗೂ ಪ್ರಕರಣವನ್ನು ಭೇದಿಸಿದ ಪೊಲೀಸರು, ಆರೋಪಿಗಳಾದ ಕಿರಣ ಗುಬ್ಬಿ (24), ಕೊಟ್ರೇಶ ಸಿ.ಕೆ ಅಲಿಯಾಸ್ ಕುಪಸಾದ್ (22), ನಿತ್ಯಾನಂದ ಅಲಿಯಾಸ್ ನಿತ್ಯಾನಂದ ಕೆಳಗಿನಮನಿ (24), ಶಿವರಾಜ್ ಅಲಿಯಾಸ್ ಶಿವು (32) ಅವರನ್ನು ಬಂಧಿಸಿದ್ದಾರೆ‌.

Leave a Reply

Your email address will not be published. Required fields are marked *