ಚುನಾವಣೆ ಕಾವು ಜೋರು ಪ್ರಯಾಣಿಕರಿಗೆ ಸಂಕಟದ ನೋವು

ಕೋಲಾರ : ಚುನಾವಣೆ ಕಾವು ಜೋರಾಗುತ್ತಿದ್ದಂತೆ ಟಿಕೆಟ್ ಅಕಾಂಕ್ಷಿಗಳು, ಅಭ್ಯರ್ಥಿಗಳು ಸೇರಿದಂತೆ ಶಾಸಕರು ಮಾಜಿ ಶಾಸಕರು ಮತದಾರರನ್ನು ಸೆಳೆಯಲು ವಿವಿಧ ಕಸರತ್ತಗಳನ್ನು ನಡೆಸುತ್ತಿದ್ದಾರೆ. ಈಗಿನಿಂದಲೇ ಜನರನ್ನು ಹಿಡಿದಿಟ್ಟುಕೊಳ್ಳಲು ರಾಜಕೀಯ ಪ್ರವಾಸಗಳು, ಓಂ ಶಕ್ತಿ ಮಾಲಾಧಾರಿಗಳಿಗೆ ಬಸ್ ವ್ಯವಸ್ಥೆ ಮಾಡಿಕೊಡತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಾರಿಗೆ ಇಲಾಖೆ ಬಸ್ಗಳು ಸೇರಿದಂತೆ ಖಾಸಗಿ ಬಸ್ಗಳಿಗೂ ಇನ್ನಿಲ್ಲದ ಬೇಡಿಕೆ ಬಂದಿದೆ, ಆದರೆ ಇದು ಪ್ರಯಾಣಿಕರಿಗೆ ಮಾತ್ರ ತ್ರೀವ ಸಂಕಷ್ಟ ತಂದೊಡ್ಡಿದೆ.

ಕಳೆದ ಹತ್ತು ದಿನಗಳಿಂದ  ಕೋಲಾರ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ಪ್ರತಿದಿನ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಬಸ್ ಗಳು ಇಲ್ಲದೇ ಸಾರ್ವಜನಿಕರು ಪ್ರಯಾಸಪಟ್ಟು ಪ್ರಯಾಣ ಮಾಡೋದು ಅನಿವಾರ್ಯವಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಗೆ ಪ್ರಯಾಣಿಸುವುದು ಕಷ್ಟಕರವಾಗಿದ್ದು  ಸಾರಿಗೆ ಸಂಸ್ಥೆ ವಿರುದ್ಧ ಪ್ರಯಾಣಿಕರು ಗಲಾಟೆ ನಡೆಸುವುದು ಮಾಮೂಲಿಯಾಗಿದೆ.

ಇನ್ನೂ ಸಾರಿಗೆ ಬಸ್ಗಳು ಕೊರತೆ ಉಂಟಾಗಲು ಪ್ರಮುಖ ಕಾರಣ ರಾಜಕೀಯ ನಾಯಕರು ಜನರಿಗೆ ಪ್ರವಾಸ ಭಾಗ್ಯ ಕಲ್ಪಿಸಿಕೊಡತ್ತಿರುವುದು. ಅಯ್ಯಪ್ಪ ಭಕ್ತರು ಹಾಗೂ ಓಂ ಶಕ್ತಿ ಮಾಲಾಧಾರಿಗಳು ಸಮಯವಾಗಿರುವುದರಿಂದ  ಟಿಕೆಟ್ ಅಕಾಂಕ್ಷಿ ಅಭ್ಯರ್ಥಿಗಳು, ಶಾಸಕರು ಹಾಗೂ ಮಾಜಿ ಶಾಸಕರು ಸೇರಿದಂತೆ ರಾಜಕೀಯ ನಾಯಕರು ಮಾಲಾಧಾರಿಗಳಿಗೆ  ಉಚಿತವಾಗಿ ಬಸ್ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ತಮಿಳುನಾಡಿನ ಮೇಲಮರವತ್ತೂರು ಓಂ ಶಕ್ತಿ ದೇವಾಲಯ ಹಾಗೂ ಕೇರಳದ ಶಬರಿಮಲೆ  ದೇವಾಲಯಗಳಿಗೆ ಪ್ರತಿನಿತ್ಯ ಜಿಲ್ಲೆಯಿಂದ ನೂರಾರು ಬಸ್ಗಳು ತೆರಳುತ್ತಿವೆ. ಹೀಗಾಗಿ ಸಾರಿಗೆ ಬಸ್ಗಳ ಕೊರತೆ ಉಂಟಾಗಿವೆ.

ಒಟ್ಟಾರೆ ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರಿಗೆ ತ್ರೀವ ತೊಂದರೆಯಾಗಿದ್ದು ಸಾರಿಗೆ ಇಲಾಖೆ ಮೊದಲು ಪ್ರಯಾಣಿಕರಿಗೆ ಆದ್ಯತೆ ನೀಡಿ ಬಸ್ ವ್ಯವಸ್ಥೆ ಒದಗಿಸಲಿ ಎಂದು ಸಾರ್ವಜನಿಕರ ಒತ್ತಾಯವಾಗಿದೆ.

Pragati TV Social Connect for more latest u

Leave a Reply

Your email address will not be published. Required fields are marked *