ಸರ್ಪದ ಭಯದ ನಡುವೆ ಪ್ರಮಾಣಿಕತೆಗೆ ಫಲ: ಪ್ರಜ್ವಲ್ ಕುಟುಂಬಕ್ಕೆ ಸರ್ಕಾರದ ಭರವಸೆ
ಗದಗ: ನೂರೊಂದು ಬಾವಿ. ನೂರೊಂದು ದೇವಸ್ಥಾನಗಳ ಸ್ವರ್ಗ. ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ನಿಧಿಯದ್ದೇ ಚರ್ಚೆ. ದಿನಬೆಳಗಾದ್ರೆ ನಿಧಿ ನಿಧಿ ಎಂಬ ಮಾತು ಗಲ್ಲಿ ಗಲ್ಲಿಯಲ್ಲೂ ಚರ್ಚೆ ನಡೆಯುತ್ತಿದೆ. ಹೌದು.. ಗದಗದ ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆ ಪಾಯ ತೆಗೆಯುವಾಗ ನಿಧಿ ಸಿಕ್ಕಿದ್ದು, ಕುಟುಂಬ ಪ್ರಮಾಣಿಕತೆ ಮೆರೆದಿದೆ. ಆದ್ರೆ. ನಿಧಿಯಲ್ಲ, ನಿಧಿ ಅಂತಾ ಅಧಿಕಾರಿಗಳು ಧ್ವಂದ್ವ ಹೇಳಿಕೆ ನೀಡಿದ ಬಳಿಕ ಕುಟುಂಬಕ್ಕೆ ಮತ್ತಷ್ಟು ಗೊಂದಲ ಉಂಟಾಗಿದೆ. ನಿಧಿಯಲ್ಲ ಅಂದ್ರೆ ನಮ್ಮ ಚಿನ್ನ ನಮಗೆ ಕೊಡಿ ಎಂದ ಕುಟುಂಬ, ಬಳಿಕ ನಿಧಿ ಬೇಡ ನಮಗೆ ಮನೆ ಕೊಡಿ ಎಂದಿತ್ತು. ಆದ್ರೆ ಇದೀಗ ಅರ್ಧ ಕೆ.ಜಿಯಷ್ಟು ಜಿನ್ನ ಸಿಕ್ಕರೂ ಕುಟುಂಬಕ್ಕ ನೆಮ್ಮದಿಯೇ ಇಲ್ಲದಂತಾಗಿದೆ. ಕುಟುಂಬ ಗೊಂದಲಕ್ಕೆ ಸಿಲುಕುವುದಕ್ಕೂ ಕಾರಣವಿದೆ. ಅದೇನಂದ್ರೆ, ಈವರೆಗೂ ಲಕ್ಕುಂಡಿಯಲ್ಲಿ ನಿಧಿ ಸಿಕ್ಕವರಿಗೆ ಒಳ್ಳೆಯದೇ ಆಗಿಲ್ಲ. ಹೀಗಾಗಿ ಕುಟುಂಬ ಆತಂಕಕ್ಕಿಡಾಗಿದೆ. ಲಕ್ಕುಂಡಿ ಗ್ರಾಮದ ಹಿರಿಯರು ಈ ಹಿಂದೆ ನಿಧಿ ಪತ್ತೆ ಬಳಿಕ ಗ್ರಾಮದಲ್ಲಿ ಏನೇಲ್ಲಾ ಆಯ್ತು ಎಂಬ ವಿಚಾರವನ್ನ ಬಿಚ್ಚಿಟ್ಟಿದ್ದಾರೆ.
ಸಿಕ್ಕ ನಿಧಿ ಸರ್ಕಾರಕ್ಕೆ ಕೊಟ್ಟ ಬಾಲಕನಿಗೆ ಶುಕ್ರದೆಸೆ
ಮನೆ ಪಾಯ ಅಗೆಯುವಾಗ ಸಿಕ್ಕ ಬರೋಬ್ಬರಿ 65 ಲಕ್ಷ ರೂಪಾಯಿಗಿಂದ ಅಧಿಕ ಮೌಲ್ಯದ ನಿಧಿಯನ್ನು ಆಸೆ ಪಡದೇ ಸರ್ಕಾರಕ್ಕೆ ಒಪ್ಪಿಸಿ ದೇಶಕ್ಕೇ ಮಾದರಿಯಾಗಿದ್ದ ಲಕ್ಕುಂಡಿಯ ಬಾಲಕ ಪ್ರಜ್ವಲ್ ರಿತ್ತಿಗೆ ಇದೀಗ ಲಕ್ ಶುರುವಾಗಿದೆ. ಸರ್ಕಾರಕ್ಕೆ ನಿಧಿ ಕೊಟ್ಟು ಪ್ರಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿಗೆ ಬಿ.ಹೆಚ್ ಪಾಟೀಲ್ ಪದವಿ ಪೂರ್ವ ಕಾಲೇಜು ಶಿಕ್ಷಣ ಸಂಸ್ಥೆ ನೆರವಿನ ಹಸ್ತ ನೀಡಿದೆ. ಟಿವಿ9 ವರದಿಗೆ ಸ್ಪಂದಿಸಿದ ಶಿಕ್ಷಣ ಸಂಸ್ಥೆ, ಪ್ರಜ್ವಲ್‌ಗೆ ಪಿಯುಸಿವರೆಗೂ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದೆ. ಪಿಯುಸಿ ಓದಿದ ಬಳಿಕ ಪೊಲೀಸ್ ಇಲಾಖೆ ಸೇರ್ತೀನಿ ಎಂದಿರೋ ಪ್ರಜ್ವಲ್, ಪೊಲೀಸ್ ಕಾನ್ಸ್‌ಸ್ಟೇಬಲ್ ಆಗುವ ಕನಸು ಬಿಚ್ವಿಟ್ಟಿದ್ದಾನೆ.
For More Updates Join our WhatsApp Group :




