ಸರ್ಕಾರದ ನಿರೀಕ್ಷೆಗೆ ಕೈಕೊಟ್ಟು, ಸ್ವರಕ್ಷಣೆಗೆ ಮುಂದಾದ ಮೀನುಗಾರರು.
ಮಂಗಳೂರು: ಕರಾವಳಿಯಲ್ಲಿ ಮೊದಲ ಬೋಟ್ ಆಂಬ್ಯುಲೆನ್ಸ್ ನಿರ್ಮಾಣವಾಗಿದೆ. ಈ ಹಿಂದೆ ಬೋಟ್ ಆಂಬ್ಯುಲೆನ್ಸ್ ಆರಂಭಿಸುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಆದ್ರೆ, ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಇದೀಗ ಸರ್ಕಾರಕ್ಕೆ ಸೆಡ್ಡು ಹೊಡೆದ ಮೀನುಗಾರರು, ತಮ್ಮ ರಕ್ಷಣೆಗೆ ತಾವೇ ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿಕೊಂಡಿದ್ದಾರೆ. ಸರ್ಕಾರದ ಯೋಜನೆಗೆ ಕಾಯದೇ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘದವರು ಮೊದಲ ಬೋಟ್ ಆಂಬುಲೆನ್ಸ್ ನಿರ್ಮಿಸಿದ್ದಾರೆ. ಮಂಗಳೂರಿನ ಉಳ್ಳಾಲ ವಲಯದ ಮೀನುಗಾರರ ಮಾದರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬೋಟ್ ಆಂಬ್ಯುಲೆನ್ಸ್ ಮೂಲಕ ಮೀನುಗಾರರ ಜೀವ ರಕ್ಷಣೆ ಕಾರ್ಯ ನಡೆಯಲಿದೆ. ನದಿ, ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭ ಅವಘಡ ಸಂಭವಿಸಿದ್ರೆ ತುರ್ತು ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ಬಳಕೆ ಮಾಡಲಾಗುತ್ತೆ. ಇನ್ನು ಸಮುದ್ರದ ಮಧ್ಯೆ ಆರೋಗ್ಯ ಸಮಸ್ಯೆ ಎದುರಾದರೂ ಸಹ ಈ ಬೋಟ್ ಆಂಬ್ಯುಲೆನ್ಸ್ ನೆರವಿಗೆ ಬರಲಿದೆ.
For More Updates Join our WhatsApp Group :




