ಇಂದು ನಡೆಯಬೇಕಾಗಿದ್ದ ಪ್ರಥಮ ಡಿ.ಇಎಲ್.ಇಡಿ ಮುಖ್ಯ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ಸೆಪ್ಟೆಂಬರ್ 12 ರಂದು ನಡೆಯಬೇಕಾಗಿದ್ದ ಸೆಪ್ಟೆಂಬರ್ -2024ರ ಪ್ರಥಮ ಡಿ.ಇಎಲ್.ಇಡಿ ಮುಖ್ಯ ಪರೀಕ್ಷೆಯನ್ನು ಕಾರಣಾಂತರಗಳಿಂದ ಮುಂದೂಡಿ ಸೆಪ್ಟೆಂಬರ್ 19 ರಿಂದ 25 ರವರೆಗೆ ನಿಗಧಿಪಡಿಸಿ ಪರಿಷ್ಕøತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂಧನ ದಕ್ಷತೆಯ ಪಂಪ್ಗಳು ಮತ್ತು ಉಪಕರಣಗಳು ಹಾಗೂ ಇಂಧನ ದಕ್ಷತೆಯ ಕ್ರಮಗಳು ಕುರಿತ ಕಾರ್ಯಾಗಾರ

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಕರ್ನಾಟಕ ಸರ್ಕಾರದ ನವೀಕರಿಸಬಹುದಾದ ಇಂಧನ ದಕ್ಷತೆ ವಿಭಾಗ ಇವರ ಪ್ರಾಯೋಜಕತ್ವದಲ್ಲಿ ಡಿಪ್ಲೊಮಾ ಮತ್ತು ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ “ಇಂಧನ ದಕ್ಷತೆಯ ಪಂಪ್ಗಳು ಮತ್ತು ಉಪಕರಣಗಳು ಹಾಗೂ ಇಂಧನ ದಕ್ಷತೆಯ ಕ್ರಮಗಳು ವಿಷಯದ ಕುರಿತು ಉಚಿತವಾಗಿ ಕಾರ್ಯಾಗಾರವನ್ನು ಸೆಪ್ಟೆಂಬರ್ 20 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30 ರವರೆಗೆ ಬೆಂಗಳೂರಿನ ಎಸ್.ಜೆ. ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

ಕಾರ್ಯಾಗಾರಕ್ಕೆ ಭಾಗವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಹೆಸರನ್ನು ಸೆಪ್ಟೆಂಬರ್ 17 ರ ಒಳಗಾಗಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448249557, 9739047466 ಮತ್ತು 9739569699 ಗೆ ಸಂಪರ್ಕಿಸಬಹುದಾಗಿದೆ ಎಂದು ಎಸ್.ಜೆ. ಸರ್ಕಾರಿ ಪಾಲಿಟೆಕ್ನಿಕ್ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *