ಟಿಎಂಸಿ ಶಾಸಕ ಕಬೀರ್ ನಡೆ ವಿವಾದ ಸೃಷ್ಟಿ.
ಮುರ್ಷಿದಾಬಾದ್ : ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಪೂರ್ಣಗೊಂಡ ಬೆನ್ನಲ್ಲೇ ಇದೀಗ ಬಂಗಾಳದಲ್ಲಿ ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಮಾದರಿಯಲ್ಲಿಯೇ ಮಸೀದಿಯೊಂದಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಅಮಾನತುಗೊಂಡ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಇಂದು ಬಿಗಿ ಭದ್ರತೆಯ ನಡುವೆ ಬಾಬರಿ ಮಸೀದಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.
ಈ ಘಟನೆಯಿಂದ ಪಶ್ಚಿಮ ಬಂಗಾಳದ ಕೋಮು ಸೂಕ್ಷ್ಮ ಪ್ರದೇಶವಾದ ಮುರ್ಷಿದಾಬಾದ್‌ನಲ್ಲಿ ಇಂದು ಉದ್ವಿಗ್ನತೆ ಉಂಟಾಗಿದೆ. ಇಂದು ಬೆಳಿಗ್ಗೆಯಿಂದ ಸಾವಿರಾರು ಜನರು ಸೇರಿದ್ದ ಸ್ಥಳದಲ್ಲಿ “ನಾರಾ-ಎ-ತಕ್ಬೀರ್, ಅಲ್ಲಾಹು ಅಕ್ಬರ್” ಎಂಬ ಘೋಷಣೆಗಳು ಮೊಳಗುತ್ತಿದ್ದಂತೆ ಕಬೀರ್ ವೇದಿಕೆಯ ಮೇಲೆ ಧರ್ಮಗುರುಗಳ ಜೊತೆಗೆ ರಿಬ್ಬನ್ ಕತ್ತರಿಸುವ ಮೂಲಕ ಶಿಲಾನ್ಯಾಸ ಮಾಡಿದ್ದಾರೆ.
ಈ ಶಿಲಾನ್ಯಾಸ ಸಮಾರಂಭವು ಭಾರೀ ಭದ್ರತಾ ವ್ಯವಸ್ಥೆಯಡಿಯಲ್ಲಿ ನಡೆಯಿತು. ಕೋಮುವಾದಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಈ ವಾರದ ಆರಂಭದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಿಂದ ಅಮಾನತುಗೊಂಡಿದ್ದ ಕಬೀರ್ ಈ ತಿಂಗಳ ಆರಂಭದಲ್ಲಿ ಬಾಬರಿ ಮಸೀದಿಯ ಶಂಕುಸ್ಥಾಪನಾ ಸಮಾರಂಭವನ್ನು ಘೋಷಿಸಿದ್ದರು. ಇದು ರಾಜಕೀಯ ಟೀಕೆಗೆ ಕಾರಣವಾಗಿತ್ತು.
For More Updates Join our WhatsApp Group :
