ರಣಭೀಕರ ಮಳೆಯಿಂದ ಮಣುವಿನಕುರಿಕೆ ಗ್ರಾಮದ ಜನರ ಜೀವನ ಅಸ್ತವಸ್ಥ

ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಣುವಿನಕುರಿಕೆ ಗ್ರಾಮದ ಸುಮಾರು ಮೂರ್ನಾಲ್ಕು ಮನೆಗಳಿಗೆ ನೀರು ನುಗ್ಗಿ ಭಾರಿ ಪ್ರಮಾಣದಲ್ಲಿ ದವಸ ಧಾನ್ಯಗಳು ಮತ್ತು ದಿನನಿತ್ಯ ಉಪಯೋಗಿಸುವ ಬಟ್ಟೆಗಳು ನೀರಿನಲ್ಲಿ ಒದ್ದೆಯಾಗಿದ್ದು, ವಾಸದ ಮನೆ ಇಲ್ಲದೆ ಬಡ ಜನರು ಕಂಗಾಲಾಗಿದ್ದಾರೆ.

ಮಣುವಿನಕುರಿಕೆ ಗ್ರಾಮದ ಅಕ್ಕಪಕ್ಕದ ಕೆರೆ-ಕಟ್ಟೆಗಳು ಮತ್ತು ಬಾವಿಗಳು ತುಂಬಿ ನೀರಿನ ಅಂತರ್ಜಲ ಮಟ್ಟ ಹೆಚ್ಚಾಗಿರುವುದರಿಂದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ತಡರಾತ್ರಿ ನೀರು ನುಗ್ಗಿದೆ. ಇದರಿಂದ ಕಂಗಾಲಗಿರುವ ಜನರು ನೀರಿನ ಅಂತರ್ಜಲ ಮಟ್ಟ ಹೆಚ್ಚಾಗಿರುವುದರಿಂದ ನೀರು ಜೋಪುತ್ತಿದ್ದು ದಿನವಿಡಿ ನೀರನ್ನು ಹೊರ ಹಾಕುವ ಕೆಲಸದಲ್ಲಿಯೇ ಕಾಲ ಕಳೆದಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಗ್ರಾಮ ಲೆಕ್ಕಿಗರು ಗಮನಕ್ಕೆ ತಂದರು ಇಲ್ಲಿಯವರೆಗೂ ಕೂಡ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ ಎನ್ನಲಾಗುತ್ತಿದೆ.

ಜಿ.ಪಂ , ತಾ.ಪಂ ಅಥವಾ ಗ್ರಾಮ.ಪಂ ಅನುದಾನಲ್ಲಿ ಚರಂಡಿ ನಿರ್ಮಿಸಿ ಜೋಪು ನೀರನ್ನ ಹೊರ ತೆಗೆಯುವಂತ ಕೆಲಸ ಮಾಡಬಹುದು ಆದರೆ ಈ ಭಾಗದ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಬಡಜನರ ಮನೆ ಒಳಗಡೆ ನೀರು ಜೋಪತ್ತಿದ್ದು, ಮನೆ ಬೀಳುವ ಆತಂಕದಲ್ಲಿ ಬದುಕುವಂತಾಗಿದೆ.

ಇನ್ನಾದರೂ ಸ್ಥಳೀಯ ಶಾಸಕರು ಮತ್ತು ಜನಪ್ರತಿನಿಧಿಗಳು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಂಡು ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡಬೇಕಿದೆ.

Pragati TV Social Connect for more latest u

Leave a Reply

Your email address will not be published. Required fields are marked *