ಕಪ್ಪತ್ತಗುಡ್ಡದಲ್ಲಿ ‘ಸಂಜೀವಿನಿ’ ಗುಹೆ ರಹಸ್ಯ.

ಕಪ್ಪತ್ತಗುಡ್ಡದಲ್ಲಿ ‘ಸಂಜೀವಿನಿ’ ಗುಹೆ ರಹಸ್ಯ.

ಚಿನ್ನದ ರಥ, ವಜ್ರ ಖಜಾನೆಗಳ ಕತೆ ವೈರಲ್!

ಗದಗ: ಐತಿಹಾಸಿ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಸಿಕ್ಕ ಬಳಿಕ ಸಂಪತ್ತಿನ ಖಜಾನೆಗಳ ಒಂದೊಂದು ರಹಸ್ಯಗಳು ಬಯಲಾಗುತ್ತಿವೆ. ಲಕ್ಕುಂಡಿ ಸಂಪತ್ತನ್ನೂ ಮೀರಿಸುವ ಸಂಪತ್ತಿನ ಖಜಾನೆಗಳು ಗದಗ ಜಿಲ್ಲೆಯಲ್ಲಿವೆ. ಲಕ್ಕುಂಡಿ ಚಿನ್ನದ ಸಂಪತ್ತು ಆಯ್ತು, ಕಪ್ಪತ್ತಗುಡ್ಡದ ಚಿನ್ನದ ಗುಹೆಗಳ ಬಗ್ಗೆಯೂ ಟಿವಿ9 ಇಂಚಿಂಚು ವರದಿ ಮಾಡಿದೆ. ಆದರೆ ಇದೀಗ ರಹಸ್ಯ ಗವಿಯೊಳಗೆ ಸಂಪತ್ತು ಸುದ್ದಿ ಕೇಳಿದರೆ ನೀವು ಬೆಚ್ಚಿಬೀಳ್ತೀರಾ. ಈ ಸಂಜೀವಿನಿ ಗುಡ್ಡದ ಗವಿಯೊಳಗೆ ಅನಂತಪದ್ಮನಾಭ, ಕುಬೇರನ ಸಂಪತ್ತಿಗೂ ಅಪಾರವಿದೆಯಂತೆ.

ಲಕ್ಕುಂಡಿ ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರು, ರಾಷ್ಟ್ರಕೂಟರು ಆಳಿದ ನಾಡು. ಇದೇ ಲಕ್ಕುಂಡಿಯಲ್ಲಿ ಸಂಪತ್ತಿನ ಖಜಾನೆಯೇ ಇದೆ. ಚಿನ್ನದ ನಾಣ್ಯ ಟಂಕಿಸುತ್ತಿದ್ದ ಲಕ್ಕುಂಡಿ. ಇದೇ ಲಕ್ಕುಂಡಿಯಲ್ಲಿ ಜನೇವರಿ 10 ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 466 ಗ್ರಾಮ ಚಿನ್ನದ ನಿಧಿ ಸಿಕ್ಕಿದೆ. ಈ ಸಿಕ್ಕಿದ್ದೇ ತಡ ಐತಿಹಾಸಿಕ ಲಕ್ಕುಂಡಿಯ ಗತವೈಭ ರಹಸ್ಯಗಳು ನಿತ್ಯವೂ ಹೊರಬರ್ತಾಯಿವೆ. ಲಕ್ಕುಂಡಿ ಸಂಪತ್ತು ಆಯ್ತು, ಕಪ್ಪತ್ತಗುಡ್ಡದ ಚಿನ್ನದ ಗುಹೆಗಳ ಸಂಪತ್ತು ಆಯ್ತು. ಈಗ ಕಪ್ಪತ್ತಗುಡ್ಡದಲ್ಲಿ ಮತ್ತೊಂದು ಸಂಪತ್ತಿನ ಗುಹೆ ರಹಸ್ಯ ಬಯಲಾಗಿದೆ.

ಕರಿಯಮ್ಮನ ಗುಡ್ಡದ ಈ ಗುಹೆಯೊಳಗಿನ ಸಂಪತ್ತಿನ ವಿಷಯ ಕೇಳಿದರೆ ನೀವು ದಂಗಾಗಿ ಹೋಗ್ತೀರಾ. ಐತಿಹಾಸಿಕ ಲಕ್ಕುಂಡಿ, ಕಪತ್ತಗುಡ್ಡದ ಚಿನ್ನದ ಗುಹೆಗಳಿಗೂ ಮೀರಿಸುವಂತಿದೆ ಈ ನಿಗೂಢ ಗವಿಯ ಸಂಪತ್ತು. ಅನಂತಪದ್ಮನಾಭ, ಕುಬೇರನ ಸಂಪತ್ತಿಗೂ ಅಪಾರ ಸಂಪತ್ತು ಈ ಗವಿಯೊಳಗಿದೆಯಂತೆ. ಅತ್ತಿಕಟ್ಟಿ ಗ್ರಾಮದ ರವಿ ಚವ್ಹಾಣ, ವಿಷ್ಣು ಚವ್ಹಾಣ ರೋಚಕ, ವಿಸ್ಮಯ, ಕೌತಕವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆದರೆ ಈ ರಹಸ್ಯ ಸಂಪತ್ತಿನ ಗವಿ ಇರುವ ಜಾಗಕ್ಕೆ ತಲುಪೋದು ರೋಚಕ, ಭಯಾನಕ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

.

Leave a Reply

Your email address will not be published. Required fields are marked *