ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ.

ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ.

60 ವರ್ಷದ ಇನ್ಕಮ್ ಟ್ಯಾಕ್ಸ್ ಕಾಯ್ದೆಗೆ ವಿದಾಯ?

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದಿರುವ ಮತ್ತು ತರುತ್ತಿರುವ ಸರ್ಕಾರ ಇದೀಗ ಆದಾಯ ತೆರಿಗೆ ವಿಭಾಗದಲ್ಲಿ ಗುರುತರ ಬದಲಾವಣೆ ತರಲು ಹೊರಟಿದೆ. 1961ರ ಇನ್ಕಮ್ ಟ್ಯಾಕ್ಸ್ ಕಾಯ್ದೆ ಬದಲು ಹೊಸ ಕಾಯ್ದೆಯನ್ನು ಜಾರಿಗೆ ತರಲಿದೆ. ಆರು ದಶಕದಲ್ಲೇ ಇದು ಭಾರತದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಆಗುತ್ತಿರುವ ಬಹುದೊಡ್ಡ ಬದಲಾವಣೆ ಎನ್ನಲಾಗಿದೆ.

ಫೆಬ್ರುವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಜಾರಿಗೆ ತರಲಾಗುವುದನ್ನು ಘೋಷಿಸಲಿದ್ದಾರೆ. ಹೊಸ ಕಾಯ್ದೆಯ ಮುಖ್ಯಾಂಶಗಳನ್ನೂ ಅವರು ಬಹಿರಂಗಪಡಿಸಬಹುದು. ವರದಿಗಳ ಪ್ರಕಾರ, ಹೊಸ ಐಟಿ ಕಾಯ್ದೆಯು 2026ರ ಏಪ್ರಿಲ್ 1ರಿಂದ ಜಾರಿಗೆ ಬರಬಹುದು.

ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಏನಿರಬಹುದು?

ಈಗಿರುವ 1961ರ ಆದಾಯ ತೆರಿಗೆ ಕಾಯ್ದೆಗೆ ಹೋಲಿಸಿದರೆ ಹೊಸ ಆದಾಯ ತೆರಿಗೆ ಕಾಯ್ದೆ ಹೆಚ್ಚು ಸರಳವಾಗಿರುತ್ತದೆ. ಇದರ ನಿಯಮಗಳು ಸರಳವಾಗಿದ್ದು, ಸಾಮಾನ್ಯ ತೆರಿಗೆ ಪಾವತಿದಾರರಿಗೆ ಸ್ಪಷ್ಟವಾಗಿ ಅರ್ಥವಾಗುವಂತಿರುತ್ತವೆ ಎಂದು ಹೇಳಲಾಗುತ್ತಿದೆ. ಹಳೆಯದಲ್ಲಿ ಇರುವ 819 ಸೆಕ್ಷನ್ ಸಂಖ್ಯೆಯನ್ನು 536ಕ್ಕೆ ಇಳಿಸಲಾಗಿದೆ. 47 ಚಾಪ್ಟರ್​ಗಳನ್ನು 23ಕ್ಕೆ ಇಳಿಸಲಾಗಿದೆ.

ಹೊಸ ಕಾಯ್ದೆಯಲ್ಲಿ ಮತ್ತೊಂದು ಮುಖ್ಯ ಅಂಶ ಎಂದರೆ, ಟ್ಯಾಕ್ಸ್ ಸಿಸ್ಟಂನಲ್ಲಿ ತಂತ್ರಜ್ಞಾನ ಅಳವಡಿಕೆ ಹೆಚ್ಚು ಗಾಢವಾಗಿರಲಿದೆ. ಭೌತಿಕ ದಾಖಲೆಗಳ ಗೋಜಲುಗಳನ್ನು ಕಡಿಮೆ ಮಾಡಲಾಗುತ್ತದೆ. ಅಂದರೆ, ಪ್ರೀ ಫಿಲ್ಡ್ ರಿಟರ್ನ್​ಗಳು, ಎಐಎಸ್, ಟಿಐಎಸ್ ಸ್ಟೇಟ್ಮೆಂಟ್​ಗಳು ಇತ್ಯಾದಿ ಬಳಕೆ ಹೆಚ್ಚುವಂತೆ ಮಾಡಬಹುದು. ಈ ಆಟೊಮೇಟೆಡ್ ವ್ಯವಸ್ಥೆಯಿಂದ ಟಿಡಿಎಸ್ ಮತ್ತು ಟಿಸಿಎಸ್ ಹೊಂದಿಕೆಯಲ್ಲಿರುವ ದೋಷಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

12 ಲಕ್ಷ ರೂವರೆಗೆ ತೆರಿಗೆ ವಿನಾಯಿತಿ ಕೊಟ್ಟಿರುವುದು ಮುಂದುವರಿಯುತ್ತದಾ?

ಕಳೆದ ಬಾರಿಯ ಬಜೆಟ್​ನಲ್ಲಿ ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. 75,000 ರೂ ಟ್ಯಾಕ್ಸ್ ಡಿಡಕ್ಷನ್ ಸೇರಿಸಿದರೆ 12,75,000 ರೂ ಒಳಗಿನ ಆದಾಯ ಇರುವವರಿಗೆ ಟ್ಯಾಕ್ಸ್ ಬಾಧ್ಯತೆ ಇರುವುದಿಲ್ಲ. ಈಗ ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ ಜಾರಿಗೆ ಬಂದರೆ ಈ ಟ್ಯಾಕ್ಸ್ ವಿನಾಯಿತಿ ಕ್ರಮಕ್ಕೆ ಸಂಚಕಾರವೇನೂ ಆಗದು. ಅದೆಲ್ಲವೂ ತನ್ನಂತಾನೇ ಮುಂದುವರಿಯಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *