ನಿರಂತರ ಮಳೆಗೆ ತತ್ತರಿಸಿದ ಹೆಬ್ಬಾಕ ಗ್ರಾಮದ ಜನ : ಮನೆ, ತೋಟ, ರಸ್ತೆಗೆ ನುಗ್ಗಿದ ನೀರು..!

ತುಮಕೂರು : ನೀರಿನ ಒಳ ಹರಿವು ಹೆಚ್ಚಳವಾದ ಹಿನ್ನಲೆಯಲ್ಲಿ ಹೆಬ್ಬಾಕ ಕೆರೆ ಒಡೆಯುವ ಆತಂಕವನ್ನು ತುಮಕೂರು ತಾಲೂಕಿನ ಊರುಕೆರೆ ಸಮೀಪವಿರುವ ಹೆಬ್ಬಾಕ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳ ಬಳಿಕ ಕೆರೆ ತುಂಬಿ ಕೋಡಿ ಬಿದ್ದಿದೆ. ಜಿಲ್ಲಾಡಳಿದಿಂದ ಕೆರೆ ಏರಿ ಒಡೆದು ನೀರು ಹೊರಗೆ ಬಿಡಲಾಗುತ್ತಿದೆ.  ಜೈನ್ ಪಬ್ಲಿಕ್ ಶಾಲೆ ಹಾಗೂ ಸುತ್ತ ಮುತ್ತ ಪ್ರದೇಶ ಕೂಡ ಜಲಾವೃತವಾಗಿದೆ. ಮುಂಜಾಗ್ರತೆಯಿಂದ ಹೈವೇಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸವಾರರನ್ನು ಕೋರಾ ಪೊಲೀಸರು ತಡೆದಿದ್ದಾರೆ. 

ಜಿಲ್ಲಾಡಳಿತ ಕೆರೆಯ ಸುತ್ತಮುತ್ತ ಜನರಿಗೆ ನಿರ್ಬಂಧ ವಿಧಿಸಲಾಗಿದ್ದು, ಹೆಬ್ಬಾಕ ಗ್ರಾಮಸ್ಥರಿಗೆ ಜಲದಿಗ್ಬಂಧನವಾಗಿದೆ. ರಸ್ತೆ ಸಂಪರ್ಕ ಕಡಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 48 ಜಲಾವೃತವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಹೆಬ್ಬಾಕ ಗ್ರಾಮದ ಆಂಜನೇಯ ದೇಗುಲ, ಮನೆಗಳು ಮುಳುಗಡೆಯಾಗಿವೆ. ಹೆಬ್ಬಾಕ, ನರಸಾಪುರ, ಊರುಕೆರೆ ಭಾಗದಲ್ಲಿ ತೋಟಗಳು ಜಲಾವೃತವಾಗಿದೆ.

Pragati TV Social Connect for more latest u

Leave a Reply

Your email address will not be published. Required fields are marked *