ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ ಲೋಕ.

ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ ಲೋಕ.

ಸಿದ್ಧರ ಗುಹೆಯೊಳಗೆ ಚಿನ್ನದ ನಿಧಿ? ಹಾವಿನ ಕಾವಲು ಕಥೆ.

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ನಾಗಾವಿ ಗ್ರಾಮದ ಗುಡ್ಡದಲ್ಲಿನ ನಿಗೂಢ ಗುಹೆಯ ಬಾವಿಗೂ ಲಕ್ಕುಂಡಿಯ ಮುಸುಕಿನ ಬಾವಿಗೆ ಸಂಬಂಧವಿದೆ. ನಾಗಾವಿ ಗುಹೆಯಲ್ಲಿನ ಬಾವಿಯಲ್ಲಿ ವಸ್ತುವೊಂದನ್ನು ತೇಲಿ ಬಿಟ್ಟರೆ ಅದು ಲಕ್ಕುಂಡಿ ಮುಸುಕಿನ ಬಾವಿಗೆ ಹೋಗ್ತಾಯಿತ್ತಂತೆ. ಸಿದ್ಧಿ ಪುರುಷರು ವಾಸವಾಗಿದ್ದ ಗುಹೆಯಲ್ಲಿ ಅಪಾರ ನಿಧಿ ಸಂಪತ್ತಿಗೆ ಹಾವಿನ ಕಾವಲುವಿದೆಯಂತೆ. ಚಿನ್ನದ ನಿಧಿ ಮುಟ್ಟಲು ಬಿಡೋದಿಲ್ಲ. ಇನ್ನೊಂದೆಡೆ ಶತಮಾನಗಳ ಹಿಂದೆ ಆಕಳೊಂದು ಈ ಗುಹೆಯೊಳಗೆ ಹೋಗಿ ಸಿದ್ಧಿ ಪುರುಷರಿಗೆ ಹಾಲು ಕೊಟ್ಟು ಬರ್ತಿತ್ತಂತೆ. ಈ ರೋಚಕ, ವಿಸ್ಮಯ ಚಿನ್ನದ ನಿಧಿಯ ಗುಹೆಯೊಳಗೆ ನಿಜಕ್ಕೂ ರಹಸ್ಯ ಅಡಗಿದೆ.

ಬಗೆದಷ್ಟು ಬಯಲಾಗುತ್ತಿವೆ ಐತಿಹಾಸಿಕ ಲಕ್ಕುಂಡಿ ರಹಸ್ಯ

ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಗದಗ ಜಿಲ್ಲೆಯಲ್ಲಿನ ಹತ್ತಾರು ರಹಸ್ಯಗಳು ಬಯಲಾಗುತ್ತಿವೆ. ಲಕ್ಕುಂಡಿಯನ್ನ ರಾಜಧಾನಿ ಮಾಡಿಕೊಂಡು ಅರಸರು ಆಳ್ವಿಕೆ ಮಾಡಿದ್ದರು. ಅಪಾರ ಪ್ರಮಾಣದಲ್ಲಿ ಚಿನ್ನವನ್ನ ಸಂಗ್ರಹ ಮಾಡಿದ್ದರು. ಟಂಕಸಾಲೆಯಲ್ಲಿ ನಾಣ್ಯಗಳ ಮುದ್ರಣ ಮಾಡುತ್ತಿದ್ದರು. ಅರಸ ಮನೆತನಗಳು ಕಪ್ಪತ್ತಗುಡ್ಡದಿಂದ ಚಿನ್ನ ತಗೆದಯುತ್ತಿದ್ದರು. ರಾಜ, ಮಹರಾಜ ಆಳ್ವಿಕೆಯ ಸಮಯದಲ್ಲಿ ಇಂದ್ರನ ಅಮರಾವತಿಗಿಂತಲು ಸಂಪತ್ತು ಇತ್ತು ಎಂದು ಇತಿಹಾಸಗಾರು ಹೇಳುತ್ತಾರೆ.

ಈ ಇತಿಹಾಸಿ ಸತ್ಯ ಅನ್ನೋದು ಒಂದೊಂದಾಗಿ ಸಾಬೀತಾಗುತ್ತ ಹೊರಟಿದೆಯಾ ಅನ್ನೋ ಅನುಮಾನ ಬರುತ್ತಿದೆ. ಐತಿಹಾಸಿಕ ಲಕ್ಕುಂಡಿ ಗ್ರಾಮದ ಸಂಪತ್ತು ಆಯ್ತು, ಕಪ್ಪತ್ತುಡ್ಡದ ನಿಗೂಢ ಗುಹೆಗಳ ಸಂಪತ್ತು ಆಯ್ತು. ಐತಿಸಹಾಸಿ ದೇವಸ್ಥಾನಗಳ ಸಂಪತ್ತು ರಹಸ್ಯ ಬಯಲಾಯ್ತು. ಆದರೂ ಜಿಲ್ಲೆಯ ಸಿರಿಸಂಪತ್ತಿನ ರಹಸ್ಯ ಮಾತ್ರ ಇನ್ನೂ ಅಂತ್ಯವಾಗಿಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *