7 ತಿಂಗಳ ಗರ್ಭಿಣಿ ಮಗಳನ್ನು ತಂದೆಯೇ ಕೊಂದ ಭೀಕರ ಘಟನೆ.
ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಇಡೀ ಧಾರವಾಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ 7 ತಿಂಗಳ ಗರ್ಭಿಣಿಯಾಗಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿದ ಘಟನೆ ನಡೆದಿದೆ. ಘಟನೆಯ ಭೀಕರತೆಯನ್ನು ಯುವಕ ವಿವೇಕಾನಂದನ ದೊಡ್ಡಮ್ಮ ಜಯಶ್ರೀ ಬಹಿರಂಗಪಡಿಸಿದ್ದು, ಆ ಹುಡುಗಿಯನ್ನು ನಮ್ಮ ಹುಡುಗ ಮದುವೆಯಾಗಿದ್ದು ತಪ್ಪೇ? ನಮ್ಮ ಮಕ್ಕಳನ್ನು ಹೊಡೆದುಹಾಕಿದ್ದಾರೆ.
ಮದುವೆಯಾಗಿ ತಿಂಗಳುಗಳೇ ಆಗಿದ್ದವು. ಹುಡುಗಿ ಏಳು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಕಣ್ಣೀರು ಹಾಕಿದ್ದಾರೆ. ಅವರು ‘‘ದೊಡ್ಡ ಜಾತಿ, ನಾವು ಸಣ್ಣ ಜಾತಿ’’ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಅವರು ಅಳಲುತೋಡಿಕೊಂಡಿದ್ದಾರೆ.
For More Updates Join our WhatsApp Group :




