‘ಶಂಕರಾಭರಣ’ ಶೂಟಿಂಗ್ ಪೂರ್ಣ.

 ‘ಶಂಕರಾಭರಣ’ ಶೂಟಿಂಗ್ ಪೂರ್ಣ.

 ಶೈನ್ ಶೆಟ್ಟಿ ಚಿತ್ರದ ಫಸ್ಟ್ ಲುಕ್ ರಿಲೀಸ್.

ಶೈನ್ ಶೆಟ್ಟಿ ಅವರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಹೊಸ ಸಿನಿಮಾ ‘ಶಂಕರಾಭರಣ’ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಈ ಚಿತ್ರದ ಶೀರ್ಷಿಕೆಯೇ ಗಮನ ಸೆಳೆಯುತ್ತಿದೆ. ಈಗ ಫಸ್ಟ್ ಲುಕ್ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಲಾಗಿದೆ. ಇತ್ತೀಚೆಗೆ ‘ಶಂಕರಾಭರಣ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ ಎಂಬ ಮಾಹಿತಿಯನ್ನು ಕೂಡ ತಿಳಿಸಲಾಗಿದೆ.

‘ರಂಗಸ್ಥಳ ಸ್ಟುಡಿಯೋಸ್’ ಮೂಲಕ ‘ಶಂಕರಾಭರಣ’ ಸಿನಿಮಾ ನಿರ್ಮಾಣ ಆಗುತ್ತಿದೆ. ದಿವಾಕರ್ ಶೆಟ್ಟಿ ಮತ್ತು ಶೈನ್ ಶೆಟ್ಟಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಒಂದು ಬಸ್ ಕೇಂದ್ರಭಾಗವಾಗಿರುತ್ತದೆ. ಆ ಬಸ್ಸಿನ ಹೆಸರೇ ‘ಶಂಕರಾಭರಣ’. ಈ ಸಿನಿಮಾದಲ್ಲಿ ಶೈನ್ ಶೆಟ್ಟಿ ಅವರು ಬಸ್ ಡ್ರೈವರ್ ಪಾತ್ರ ಮಾಡಿದ್ದಾರೆ.

‘ಶಂಕರಾಭರಣ’ ಸಿನಿಮಾದಲ್ಲಿ ಕರಾವಳಿ ಭಾಗದ ಕಥೆಯನ್ನು ಹೇಳಲಾಗುತ್ತದೆ. ಬಸ್ ಚಾಲಕನೊಬ್ಬ ದೂರದ ಹಳ್ಳಿಯ ಹೊಸ ಮಾರ್ಗಕ್ಕೆ ನಿಯೋಜನೆಗೊಂಡಾಗ ಏನೆಲ್ಲ ನಡೆಯುತ್ತದೆ ಎಂಬುದೇ ಈ ಚಿತ್ರದ ಸಾರಾಂಶ ಆಗಿರಲಿದೆ. ಒಂದು ಮೊಟ್ಟೆಯ ಕಥೆ, ಕಾಂತಾರ, ಜೇಮ್ಸ್ ಸಿನಿಮಾಗಳ ಬಳಿಕ ಶೈನ್ ಶೆಟ್ಟಿ ಅವರು ‘ಶಂಕರಾಭರಣ’ ಚಿತ್ರದಲ್ಲಿ ಗಮನಾರ್ಹ ಪಾತ್ರ ಮಾಡಿರುವುದಾಗಿ ಚಿತ್ರತಂಡ ಹೇಳಿದೆ.

ಈ ಮೊದಲು ‘ಮಿಥ್ಯ’ ಸಿನಿಮಾವನ್ನು ನಿರ್ದೇಶಿಸಿದ್ದ ಸುಮಂತ್ ಅವರು ಈಗ ‘ಶಂಕರಾಭರಣ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಶೇಷ ಕಥಾಹಂದರದ ಕಾರಣದಿಂದ ‘ಮಿಥ್ಯ’ ಸಿನಿಮಾ ಗಮನ ಸೆಳೆದಿತ್ತು. ಈಗ ಅದೇ ನಿರ್ದೇಶಕರು ‘ಶಂಕರಾಭರಣ’ ಚಿತ್ರವನ್ನು ಮಾಡಿರುವುದರಿಂದ ನಿರೀಕ್ಷೆ ಮೂಡಿದೆ.

 ‘ಶಂಕರಾಭರಣ’ ಸಿನಿಮಾಗೆ ಚರಣ್ ರಾಜ್ ಅವರು ಸಂಗೀತ ನೀಡಿದ್ದಾರೆ. ಉದಿತ್ ಖುರಾನಾ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ‘ರಂಗಸ್ಥಳ ಸ್ಟುಡಿಯೋಸ್ ಮೂಲಕ ನೈಜ ಕಥೆಗಳನ್ನು ಹೇಳುವುದೇ ನಮ್ಮ ಉದ್ದೇಶ’ ಎಂದು ನಿರ್ಮಾಪಕರಾದ ಶೈನ್ ಶೆಟ್ಟಿ ಮತ್ತು ದಿವಾಕರ ಶೆಟ್ಟಿ ಅವರು ಹೇಳಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಅಪ್​ಟೇಟ್ ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *