ಸಹಾರನ್‌ಪುರ: ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಆಲ್ಕೋಹಾಲ್ ಖರೀದಿಸಲು ಹಣ ನೀಡಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ 55 ವರ್ಷದ ತನ್ನ ತಾಯಿಯನ್ನು ಹೊಡೆದು ಕೊಂದಿದ್ದಾನೆ. ಈ ಕೃತ್ಯವೆಸಗಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಭಯಪುರಂ ಕಾಲೋನಿಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.
ಅಕ್ಷಯ್ ಎಂಬಾತ ತನ್ನ ತಾಯಿ ಆಶಾ ದೇವಿಯ ಬಳಿ ಮದ್ಯ ಖರೀದಿಸಲು ಹಣ ಕೇಳಿದ. ಆಕೆ ತನ್ನ ಬಳಿ ಹಣವಿಲ್ಲ ಎಂದು ಹೇಳಿದರು. ದುಡ್ಡು ಇಲ್ಲದಿದ್ದರೆ ನಿನ್ನ ಆಭರಣಗಳನ್ನು ಮಾರಾಟ ಮಾಡಲು ಕೊಡು ಎಂದು ಆತ ಕೇಳಿದ. ಅದಕ್ಕೆ ಆಕೆ ಒಪ್ಪಲಿಲ್ಲ. ಹೀಗಾಗಿ, ಕೋಪದಿಂದ ಅಕ್ಷಯ್ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ.
ತಾಯಿ ಮತ್ತು ಮಗನ ನಡುವಿನ ವಾಗ್ವಾದ ಎಷ್ಟು ತೀವ್ರವಾಯಿತು ಎಂದರೆ ಅಕ್ಷಯ್ ತನ್ನ ತಾಯಿಯನ್ನು ಹೊಡೆದು ತಲೆಯನ್ನು ಗೋಡೆಗೆ ಹಲವಾರು ಬಾರಿ ಚಚ್ಚಿದ್ದಾನೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆಯಿಂದ ಆಶಾ ದೇವಿ ಎಂಬ ಮಹಿಳೆಗೆ ಗಂಭೀರ ಗಾಯಗಳಾಗಿ ಕುಸಿದು ಬಿದ್ದರು.
ಅಪರಾಧದ ಸ್ಥಳದಲ್ಲಿ ಆರೋಪಿಯನ್ನು ಬಂಧಿಸಲಾಯಿತು ಮತ್ತು ಗಾಯಗೊಂಡ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಪೊಲೀಸರ ಪ್ರಕಾರ, ಅಕ್ಷಯ್ ಬಿಹಾರದಲ್ಲಿ ಮದುವೆಯಾದ ನಂತರ 15 ದಿನಗಳ ಹಿಂದೆ ಸಹರಾನ್‌ಪುರಕ್ಕೆ ಮರಳಿದ್ದ. ಆತನ ಪತ್ನಿ ಎರಡು ದಿನಗಳ ಹಿಂದೆ ತಮ್ಮ ಪೋಷಕರ ಮನೆಗೆ ತೆರಳಿದ್ದಳು.
For More Updates Join our WhatsApp Group :
