ಬಿಹಾರ: ಬಿಹಾರದ ಚಂಪಾರಣ್ಯದಲ್ಲಿ ನಿರ್ಮಾಣವಾಗುತ್ತಿರುವ ವಿರಾಟ್ ರಾಮಾಯಣ ದೇವಾಲಯದಲ್ಲಿ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ತಯಾರಿಸಿದ 33 ಅಡಿ ಎತ್ತರ, 210 ಟನ್ ತೂಕದ ಏಕಶಿಲಾ ಶಿವಲಿಂಗವು ರಸ್ತೆ ಮೂಲಕ ಸುಮಾರು 2,100 ಕಿಲೋಮೀಟರ್ ದೂರದಲ್ಲಿರುವ ಚಂಪಾರಣ್ಯಕ್ಕೆ ತೆರಳಿದೆ.
ಇದು ವಿರಾಟ್ ರಾಮಾಯಣ ಮಂದಿರಕ್ಕೆ ವಿಶೇಷ ಆಕರ್ಷಣೆಯಾಗಲಿದೆ. ದೇಶಾದ್ಯಂತದ ಪ್ರಮುಖ ಸಂತರು, ವಿದ್ವಾಂಸರು ಮತ್ತು ಸಾವಿರಾರು ಭಕ್ತರು ಪ್ರಾಣ ಪ್ರತಿಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದೇವಾಲಯ ಟ್ರಸ್ಟ್ ತಿಳಿಸಿದೆ.
For More Updates Join our WhatsApp Group :
