ರಾಜಸ್ಥಾನ: ದುಬಾರಿ ಬೆಲೆಯ ಐಫೋನ್ ಎಂದ್ರೆ ಯುವಕರಿಗಂತೂ ಪಂಚ ಪ್ರಾಣ. ಹಣ ಇಲ್ಲದಿದ್ರೆ ಏನಂತೆ ಸಾಲ ಮಾಡಿಯಾದ್ರೂ ಈ ದುಬಾರಿ ಫೋನ್ ಖರೀದಿಸುವವರಿದ್ದಾರೆ. ಹೀಗೆ ಅದೆಷ್ಟೋ ಜನ ಈಎಮ್ಐ ಮೂಲಕ ಐಫೋನ್ ಖರೀದಿಸಿದ್ದಾರೆ. ಹೀಗಿರುವಾಗ ಈ ದುಬಾರಿ ಫೋನ್ ಕಳೆದು ಹೋದ್ರೆ ಜೀವವೇ ಹೋದಂತಾಗುತ್ತದೆ ಅಲ್ವಾ.
ಇಂತಹದ್ದೇ ಹೃದಯ ವಿದ್ರಾವಕ ಘಟನೆಯೊಂದು ಜೈಪುರದಲ್ಲಿ ನಡೆದಿದ್ದು, ಐಫೋನ್ ಕಳೆದು ಹೋಯ್ತೆಂದು ಯುವಕನೊಬ್ಬ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಹೌದು ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ ದಾರಿ ಕಾಣದೆ ಆಕ್ಟಿವಾದಲ್ಲಿ ಹೋಗುತ್ತಿದ್ದ ಆ ಯುವಕ ರಸ್ತೆ ಗುಂಡಿಗೆ ಬಿದ್ದಿದ್ದಾನೆ. ಜೊತೆಗೆ ಆತನ ಮೊಬೈಲ್ ನೀರಲ್ಲಿ ಕಳೆದು ಹೋಗಿದ್ದು, ಎಷ್ಟೇ ಹುಡುಕಿದರೂ ಮೊಬೈಲ್ ಸಿಗದೇ ಹೋದಾಗ ಬೇಸರಗೊಂಡ ಯುವಕ ಕಣ್ಣೀರು ಸುರಿಸಿದ್ದಾನೆ.

ದುಬಾರಿ ಫೋನ್ ಹೋಯ್ತಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಯುವಕ:
ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಫೋನ್ ನೀರಲ್ಲಿ ಹೋಯ್ತು ಎಂದು ಯುವಕನೊಬ್ಬ ಅತ್ತಿದ್ದಾನೆ. ರಸ್ತೆಯಲ್ಲಿ ನೀರು ತುಂಬಿದ್ದ ಕಾರಣ ಆ ಯುವಕನ ಆಕ್ಟಿವಾ ರಸ್ತೆ ಗುಂಡಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಆತನ ಜೋಬಿನಲ್ಲಿದ್ದ ಮೊಬೈಲ್ ನೀರಿಗೆ ಬಿದ್ದಿದೆ. ಕಷ್ಟಪಟ್ಟು ಖರೀದಿಸಿದ್ದ ಮೊಬೈಲ್ ಹೋಯ್ತಲ್ಲ ಎಂದು ಆ ಯುವಕ ರಸ್ತೆ ಮಧ್ಯದಲ್ಲೇ ನಿಂತು ಗಳಗಳನೆ ಕಣ್ಣೀರು ಸುರಿಸಿದ್ದಾನೆ.
ವರದಿಗಳ ಪ್ರಕಾರ, “ಹಲ್ದಾರ್ ಎಂಬ ಯುವಕ ತನ್ನ ಆಕ್ಟಿವಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಆತನ ಮೊಬೈಲ್ ರಸ್ತೆಯಲ್ಲಿ ನಿಂತ ನೀರಿಗೆ ಬಿದ್ದಿದೆ. ಎಷ್ಟೇ ಹುಡುಕಿದರೂ ಫೋನ್ ಸಿಗದೇ ಹೋದಾಗ ಆತ ಹತಾಶನಾಗಿ ಕಣ್ಣೀರು ಸುರಿಸಿದ್ದು, ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಜನ ಪಾಪ ಪರದಾಡಬೇಕಿದೆ ಎಂದು ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.
Ghar Ke Kalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ರಸ್ತೆಯಲ್ಲಿ ನಿಂತ ಮಳೆ ನೀರಲ್ಲಿ ತನ್ನ ಫೋನ್ಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯವನ್ನು ಕಾಣಹುದು. ಎಷ್ಟೇ ಹುಡುಕಿದರೂ ಫೋನ್ ಸಿಗದೇ ಹೋದಾಗ, ಅಯ್ಯೋ ನನ್ನ ಫೋನ್ ಹೋಯ್ತು, ನಾನು ಏನ್ ಮಾಡ್ಲಿ ಈಗ ಎಂದು ಅಲ್ಲೇ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.