ಹೆತ್ತೇನಹಳ್ಳಿ ಶ್ರೀ ಆದಶಕ್ತಿ ದೇವಿ ದೇವಾಲಯದಲ್ಲಿ ಕಳ್ಳತನ.

ಹೆತ್ತೇನಹಳ್ಳಿ ಶ್ರೀ ಆದಶಕ್ತಿ ದೇವಿ ದೇವಾಲಯದಲ್ಲಿ ಕಳ್ಳತನ.

ತುಮಕೂರು ಗ್ರಾಮಾಂತರದ ಹೆತ್ತೇನಹಳ್ಳಿ ಗ್ರಾಮದ ದೇವಾಲಯ.

ತುಮಕೂರು : ಗ್ರಾಮಾಂತರದ ಹೆತ್ತೇನಹಳ್ಳಿ ಗ್ರಾಮದ ಶ್ರೀ ಆದಶಕ್ತಿ ದೇವಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ಸಂಭವಿಸಿದ್ದು, ಭಕ್ತರಲ್ಲಿ ಆಕ್ರೋಶ ಮತ್ತು ಆತಂಕ ಮೂಡಿಸಿದೆ.

ತಡರಾತ್ರಿ ಖದೀಮರು ದೇವಾಲಯದ ಸಿಸಿ ಕ್ಯಾಮೆರಾಗಳನ್ನು ಒಡೆದು ಒಳನುಗ್ಗಿದ್ದಾರೆ. ಅತ್ಯಂತ ಸೂಕ್ಷ್ಮವಾಗಿ ಕೈಚಳಕ ತೋರಿಸಿರುವ ಕಳ್ಳರು, ವಿಗ್ರಹದ ಮೇಲೆ ಅಲಂಕರಿಸಲಾಗಿದ್ದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ.

ದೇವಾಲಯದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳಿದ್ದರೂ, ಖದೀಮರು ಕೇವಲ ವಿಗ್ರಹದ ಮೈಮೇಲಿ ಹಾಕಿದ್ದ ಮೂರು ಕಾಸಿನ ಚಿನ್ನದ ಸರ (ಸುಮಾರು 50 ಗ್ರಾಂ) ಮಾತ್ರ ಕದ್ದೊಯ್ದಿದ್ದಾರೆ ಎಂಬುದು ಆಶ್ಚರ್ಯ ಮೂಡಿಸಿದೆ.

ಕೆಲವೇ ದಿನಗಳಲ್ಲಿ ದೇವಾಲಯದಲ್ಲಿ ಜಾತ್ರೆ ನಡೆಯಲಿರುವ ಹಿನ್ನೆಲೆ ಈ ಕಳ್ಳತನ ನಡೆದಿದೆ. ಇದರ ಪರಿಣಾಮವಾಗಿ ಸಹಸ್ರಾರು ಭಕ್ತರ ಧಾರ್ಮಿಕ ಭಾವನೆಗೆ ತೀವ್ರ ನೋವುಂಟಾಗಿದೆ.

ಕಳ್ಳತನದ ವಿಷಯ ತಿಳಿದು ಸ್ಥಳೀಯ ಶಾಸಕ ಸುರೇಶ್ ಗೌಡ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರ ಜೊತೆಗೆ ತಹಶೀಲ್ದಾರ್ ಕೂಡ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *