ವೃದ್ಧೆಯ ಚಿನ್ನದ ಸರ ಎಗರಿಕೆ; ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ..
ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ ವೇಳೆ ವೃದ್ದೆಯ ಚಿನ್ನದ ಸರವನ್ನು ಕಳ್ಳಿಯರು ಎಗರಿಸಿದ್ದಾರೆ. ಮೂವರು ಕಳ್ಳಿಯರ ಕರಾಮತ್ತು ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೃದ್ಧೆಯನ್ನು ಮೂರು ಕಡೆಯಿಂದ ಸುತ್ತುವರಿದು ಚಿನ್ನದ ಸರ ಕದ್ದಿದ್ದಾರೆ.
ಹೆಜಮಾಡಿ ನಿವಾಸಿ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಪೂಜೆಯ ವೇಳೆ ಮೂರು ಕಡೆಯಿಂದ ಸುತ್ತುವರಿದ ಕಳ್ಳಿಯರು ಗಂಟೆ ಹೊಡೆಯುವ ನೆಪದಲ್ಲಿ ಚಿನ್ನದ ಸರ ಎಗರಿಸಿದ್ದಾರೆ. 2 ಲಕ್ಷ ಮೌಲ್ಯದ ಚಿನ್ನದ ಸರ ಎಂದು ಹೇಳಲಾಗಿದೆ. ಇದೀಗ ಆ ಮೂರು ಕಳ್ಳಿಯರ ಪತ್ತೆಗಾಗಿ ಪಡುಬಿದ್ರಿ ಪೊಲೀಸರು ಬಲೆ ಬಿಸಿದ್ದಾರೆ.
For More Updates Join our WhatsApp Group :




