ಟಾಕ್ಸಿಕ್ ಜೊತೆ ಕ್ಲ್ಯಾಶ್ ಆದರೂ ಆತಂಕವಿಲ್ಲ ಎಂದ ನಿರ್ಮಾಪಕ.
ಕಳೆದ ವರ್ಷ ಬಿಡುಗಡೆಯಾದ ‘ಧುರಂಧರ್’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸಾಕಷ್ಟು ಯಶಸ್ಸು ಕಾಣುತ್ತಿದೆ. ಕಳೆದ ವರ್ಷ ಸಾವಿರ ಕೋಟಿ ಗಳಿಸಿದ ಏಕೈಕ ಸಿನಿಮಾ ಅದು. ಈ ಚಿತ್ರವು ಇನ್ನೂ ಬಾಕ್ಸ್ ಆಫೀಸ್ನಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಧುರಂಧರ್ಗೆ ಪ್ರತಿಸ್ಪರ್ಧಿಯಾಗಿ ಬೇರೆ ಯಾವುದೇ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಪ್ರತಿದಿನ ಆದಾಯದಲ್ಲಿ ಹೊಸ ಗರಿಷ್ಠ ಮಟ್ಟವನ್ನು ದಾಖಲಿಸುತ್ತಿದೆ. ಈ ಚಿತ್ರದ ಸೀಕ್ವೆಲ್ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಆ ಸಮಯದಲ್ಲಿ ‘ಟಾಕ್ಸಿಕ್’ ಕೂಡ ಬಿಡುಗಡೆ ಆಗುತ್ತಿದೆ. ಈ ಕ್ಲ್ಯಾಶ್ ವೇಳೆ ಉಳಿದ ಸಿನಿಮಾಗಳು ಹಿಂದೇಟು ಹಾಕುತ್ತಿವೆ.
ಬಾಲಿವುಡ್ನಲ್ಲಿ ‘ಧುರಂಧರ್’ ಚಿತ್ರದ ಕ್ರೇಜ್ ಮತ್ತು ಯಶಸ್ಸನ್ನು ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರು ಮೆಚ್ಚಿಕೊಂಡಿದ್ದಾರೆ. ‘ಧುರಂಧರ್’ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ‘ಧುರಂಧರ್’ ಚಿತ್ರದ ಮೊದಲ ಭಾಗ ಡಿಸೆಂಬರ್ 5 ರಂದು ಬಿಡುಗಡೆಯಾಯಿತು. ಈಗ ಎರಡನೇ ಭಾಗ ಮಾರ್ಚ್ 19ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.
‘ಆವಾರಪನ್ 2’ ಚಿತ್ರದಲ್ಲಿ ಇಮ್ರಾನ್ ಹಶ್ಮಿ ನಾಯಕನಾಗಿ ನಟಿಸುತ್ತಿದ್ದಾರೆ. ಆವರಿಗೆ ಆದ ಗಾಯದಿಂದಾಗಿ ಚಿತ್ರದ ಚಿತ್ರೀಕರಣ ಮುಂದೂಡಲಾಗಿತ್ತು. ಇದರಿಂದಾಗಿ ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಮುಖೇಶ್ ಭಟ್ ಹೇಳಿದ್ದಾರೆ.
For More Updates Join our WhatsApp Group :


