ಮಂಡ್ಯ: ಬಿಜೆಪಿ ಹಾಗೂ ಜೆಡಿಎಸ್ ನಡೆಸುತ್ತಿರುವ ಜಂಟಿ ಮೈಸೂರು ಚಲೋ ಪಾದಯಾತ್ರೆ ಬುಧವಾರ ಮಂಡ್ಯ ಪ್ರವೇಶಿಸಿದೆ. ಮಾಜಿ ಸಿಎಂಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಈ ಯಾತ್ರೆಯಲ್ಲಿ ಭಾಗಿಯಾಗಿದ್ದರೂ ಮಂಡ್ಯ ಮಾಜಿ ಸಂಸದೆ ಸುಮಲತಾ ಮಾತ್ರ ಎಲ್ಲೂ ಕಾಣಿಸಿಕೊಂಡಿಲ್ಲ.
ಇದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಪಾದಯಾತ್ರೆ ಆರಂಭವಾಗಿ ಐದು ದಿನಗಳಾಗಿದ್ದರೂ ಸುಮಲತಾ ಇದುವರೆಗೂ ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿಲ್ಲ. ಪಾದಯಾತ್ರೆ ಮಂಡ್ಯ ಪ್ರವೇಶಿದಾಗ ಆದರೂ ಅವರು ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದು ಹುಸಿಯಾಗಿದ್ದು ಮಾತ್ರವಲ್ಲದೆ ಪಾದಯಾತ್ರೆಗೆ ಸಂಬಂಧಿಸಿದ ಬ್ಯಾನರ್ಗಳಲ್ಲೂ ಅವರ ಫೋಟೋ ಮಿಸ್ ಆಗಿದೆ.
ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಸುಮಲತಾ ಲೋಕಸಭಾ ಚುನಾವಣೆ ಸಂದರ್ಭ ಬಿಜೆಪಿ ಸೇರಿದ್ದರು. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಮಂಡ್ಯದ ಟಿಕೆಟ್ನಿಂದ ವಂಚಿತರಾಗಿದ್ದರು. ಬಳಿಕ ಬಿಜೆಪಿಯಿಂದ ಸಾವಿಧಾನಿಕ ಸ್ಥಾನಮಾನಗಳು ಸಿಗುನ ನಿರೀಕ್ಷೆಯಿತ್ತು. ಆದರೆ ಇದಾವ ಭರವಸೆಗಳೂ ಈಗ ಉಳಿಯದ ಕಾರಣ ಪಾದಯಾತ್ರೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.