ಆಧುನಿಕತೆ ಎಷ್ಟೇ ಬೆಳೆದರೂ ಕೆಲವು ಭಾಗಗಳು ಇನ್ನೂ ಅಂಧಃಕಾರದಲ್ಲೇ ಇವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ..!

ಈ ಘಟನೆಯಲ್ಲಿ ಒಂದೂವರೆ ವರ್ಷದ ಎಳೆ ಕಂದಮ್ಮನಿಗೆ ಹಾವು ಕಚ್ಚಿತ್ತು. ದೂರದ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ಯುವಷ್ಟರಲ್ಲಿ ವಿಷ ದೇಹಪೂರ್ತಿ ಆವರಿಸಿ ಸಾವನ್ನಪ್ಪಿದೆ. ಇಷ್ಟಲ್ಲದೇ, ಅಂತ್ಯಸಂಸ್ಕಾರಕ್ಕೆಂದು ಮಗುವನ್ನು ಆಂಬ್ಯುಲೆನ್ಸ್ನಲ್ಲಿ ವಾಪಸ್ ಕರೆ ತರುತ್ತಿದ್ದಾಗ ಅದು ಕೆಟ್ಟು ನಿಂತಿದೆ. 10 ಕಿಮೀ ದೂರ ಮಗುವಿನ ಶವವನ್ನು ಆ ತಾಯಿ ಆಕೆಯ ಹೆಗಲ ಮೇಲೆ ಹೊತ್ತುಕೊಂಡೇ ತಂದು ವಿಧಿ ವಿಧಾನ ಮುಗಿಸಿದರು. ಆಧುನಿಕತೆ ಎಷ್ಟೇ ಬೆಳೆದರೂ ಕೆಲವು ಭಾಗಗಳು ಇನ್ನೂ ಅಂಧಃಕಾರದಲ್ಲೇ ಇವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಇಂಥದ್ದೊಂದು ಕರುಳು ಹಿಂಡುವ ಘಟನೆ ನಡೆದಿದ್ದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಲ್ಲೇರಿ ಎಂಬ ಗ್ರಾಮದಲ್ಲಿ. ಇಷ್ಟೆಲ್ಲಾ ಅನಾಹುತಕ್ಕೆ ಪ್ರಮುಖ ಕಾರಣ ಆ ಊರಿಗೆ ರಸ್ತೆ ಇಲ್ಲದೇ ಇರುವುದು. ಅನಾಹುತ ನಡೆದರೂ ಅಲ್ಲಿನ ಜಿಲ್ಲಾಧಿಕಾರಿ ಮಾತ್ರ ಇದೊಂದು ಸಹಜ ಘಟನೆ ಎಂಬಂತೆ ವರ್ತಿಸಿದ್ದಾರೆ. ಗ್ರಾಮಕ್ಕೆ ವೈದ್ಯರನ್ನು ನೇಮಿಸಲಾಗಿದೆ. ಆದರೆ, ಅವರು ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.

ಊರಿಗೊಂದು ಉತ್ತಮ ರಸ್ತೆ ಹಾಕಿಸುವ ಬಗ್ಗೆ ಮಾತ್ರ ಉಸಿರೆತ್ತಿಲ್ಲ. ಮೇ 26 ರಂದು ಈ ಘಟನೆ ನಡೆದಿದೆ. ಮನೆಯ ಹೊರಗೆ ಮಲಗಿದ್ದ ಒಂದೂವರೆ ವರ್ಷದ ಮಗುವಿಗೆ ಹಾವು ಕಚ್ಚಿದೆ. ವಿಷಯ ತಿಳಿದ ಪೋಷಕರು ಮಗುವನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಊರಿಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಆಸ್ಪತ್ರೆಗೆ ತಲುಪಲು ಬಹಳ ಸಮಯ ಹಿಡಿಯಿತು. ಇದರಿಂದ ವಿಷ ಮಗುವಿನ ದೇಹವೆಲ್ಲ ಆವರಿಸಿದೆ. ತಡವಾದ್ದರಿಂದ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ನಂತರ ಅಂತ್ಯಕ್ರಿಯೆಗಾಗಿ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಮಗುವನ್ನು ಕಳೆದುಕೊಂಡ ಶೋಕದಲ್ಲಿಯೇ ಆಂಬ್ಯುಲೆನ್ಸ್‌ನಲ್ಲಿ ವಾಪಸ್ ಕರೆತರಲಾಗುತ್ತಿತ್ತು. ವೆಲ್ಲೂರಿನಿಂದ ಬರುತ್ತಿದ್ದಾಗ ಹದಗೆಟ್ಟ ರಸ್ತೆಯಿಂದಾಗಿ ಆಂಬ್ಯುಲೆನ್ಸ್ ಅರ್ಧದಾರಿಯಲ್ಲೇ ಕೆಟ್ಟು ನಿಂತಿದೆ. ಮುಂದೆ ಸಾಗಲು ಸಾಧ್ಯವಿಲ್ಲ ಎಂದಾದಾಗ ಮಗುವಿನ ತಾಯಿ ಶವವನ್ನು ಹೆಗಲ ಮೇಲೇ ಹೊತ್ತುಕೊಂಡು 10 ಕಿ.ಮೀ ದೂರ ನಡೆದುಕೊಂಡೇ ಕ್ರಮಿಸಿ ಗ್ರಾಮಕ್ಕೆ ಬಂದರು. ಈ ಘಟನೆ ತಮಿಳುನಾಡಿನಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.

Pragati TV Social Connect for more latest u

Leave a Reply

Your email address will not be published. Required fields are marked *