“ಗಬ್ಬರ್ ಸಿಂಗ್ ಟ್ಯಾಕ್ಸ್ ಎನ್ನುತ್ತಿದ್ದವರೆ ಇಂದು ಕ್ರೆಡಿಟ್ ಪಡೆಯಲು ಓಟ!” – GST ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ತಿರುಗೇಟು.

"ಗಬ್ಬರ್ ಸಿಂಗ್ ಟ್ಯಾಕ್ಸ್ ಎನ್ನುತ್ತಿದ್ದವರೆ ಇಂದು ಕ್ರೆಡಿಟ್ ಪಡೆಯಲು ಓಟ!" - GST ವಿಚಾರದಲ್ಲಿ ನಿರ್ಮಲಾ ಸೀತಾರಾಮನ್ ತಿರುಗೇಟು

ದೆಹಲಿ:ಜಿಎಸ್ಟಿ ಕುರಿತಾದ ಹೊಸದಾಗಿ ಉದ್ಭವಿಸಿರುವ ರಾಜಕೀಯ ಚರ್ಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ತಿರುಗೇಟು ನೀಡಿದ್ದಾರೆ. “ಜಿಎಸ್ಟಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದವರು ಇಂದು ಅದಕ್ಕೇ ಕ್ರೆಡಿಟ್ ಪಡೆಯಲು ಮುಂದಾಗಿದ್ದಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಅವರು ಜಿಎಸ್ಟಿಗೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದಿದ್ದರು. ಇಂದಿನ ಸುಧಾರಣೆಗಳಿಗೆ ಅವರೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಸಚಿವೆ ತೀವ್ರವಾಗಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಆರೋಪ ಮತ್ತು ನಿರ್ಮಲಾ ಪ್ರತಿಕ್ರಿಯೆ:

ಕಾಂಗ್ರೆಸ್ ಮುಖಂಡರು, ವಿಶೇಷವಾಗಿ ರಾಹುಲ್ ಗಾಂಧಿ, ಜಿಎಸ್ಟಿ ಸುಧಾರಣೆಗಳಿಗೆ ತಾವು ಹಲವು ವರ್ಷಗಳಿಂದ ಸಲಹೆ ನೀಡುತ್ತಿದ್ದೆವು ಎಂದು ಹೇಳಿದ್ದಾರೆ. ಆದರೆ, ಅದನ್ನು ಮತದಾನ ಚಳವಳಿ ಆರಂಭಿಸಿದ ನಂತರ ಮಾತ್ರ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿತ್ತೆಂದು ಅವರ ಆರೋಪ.

ಇದಕ್ಕೆ ಪ್ರತಿಕ್ರಿಯಿಸುತ್ತಲೇ, ನಿರ್ಮಲಾ ಸೀತಾರಾಮನ್, “ವಿಚಾರ ತಿಳಿದುಕೊಂಡು ಮಾತನಾಡಿ” ಎಂದು ಟೀಕಾಕಾರರಿಗೆ ಸಲಹೆ ನೀಡಿದರು.

“ಜಿಎಸ್ಟಿಯಿಂದ ರಾಜ್ಯಗಳಿಗೆ ಆದಾಯ ಕಡಿಮೆಯಾಗುವುದಿಲ್ಲ”

ಜಿಎಸ್ಟಿ ಸಿಸ್ಟಂ ನಿಂದ ರಾಜ್ಯಗಳ ಆದಾಯ ಇಳಿಯುತ್ತದೆ ಎಂಬ ಭಯಕ್ಕೆ ಉತ್ತರವಾಗಿ, ಕೇಂದ್ರಕ್ಕೂ ಆದಾಯ ನಷ್ಟವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. “ಜಿಎಸ್ಟಿ ಜಾರಿಗೆ ಕೇಂದ್ರ ಹಾಗೂ ರಾಜ್ಯಗಳು ಕೆಲ ತೆರಿಗೆಗಳನ್ನು ಬಿಟ್ಟುಕೊಟ್ಟಿವೆ. ಇದು ದಾನವಲ್ಲ, ಸಂಯುಕ್ತ ನಿರ್ಧಾರ” ಎಂದರು.

ಜನಸಾಮಾನ್ಯರ ಕ್ಷೇಮವೇ ಪ್ರಾಥಮಿಕತೆ”

“ಆದಾಯವೇ ಅಲ್ಲ, ಜನರ ಒಳಿತು ಮುಖ್ಯ” ಎಂಬ ಮೋದಿ ಧೋರಣೆಯನ್ನೂ ಸೀತಾರಾಮನ್ ಅವರು ಉಲ್ಲೇಖಿಸಿದರು. “ಕೊವಿಡ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಉಚಿತ ಲಸಿಕೆ ನೀಡಿದ ಮಹತ್ವದ ನಿರ್ಧಾರ ಕೈಗೊಂಡರು. ಆದಾಯ ಬಿಟ್ಟು ಜನರ ಜೀವನ ರಕ್ಷಿಸುವುದರತ್ತ ಗಮನಹರಿಸಿದರು” ಎಂದರು.

ಪೆಟ್ರೋಲ್-ಡೀಸಲ್ ಜಿಎಸ್ಟಿಗೆ ಬರಲ್ಲ

ಪೆಟ್ರೋಲ್ ಮತ್ತು ಡೀಸೆಲ್‌ನ್ನು ಜಿಎಸ್ಟಿಗೆ ಒಳಪಡಿಸುವ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಚಿವೆ, ಇದು ರಾಜ್ಯಗಳ ನಿರ್ಧಾರ ಎಂದು ಹೇಳಿದ್ದಾರೆ. ಈಗಾಗಲೇ ಅದಕ್ಕಾಗಿ ಯಾವುದೇ ಪ್ರಸ್ತಾವನೆ ಜಿಎಸ್ಟಿ ಕೌನ್ಸಿಲ್ ಮುಂದೆ ಇಲ್ಲ ಎಂಬುದು ಅವರ ಮಾತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *