ಮುಂಬೈ : ಮಹಾರಾಷ್ಟ್ರದಲ್ಲಿ ನಡೆದ ದುರಂತ ಘಟನೆಯಲ್ಲಿ ಇಲ್ಲಿನ ಸಿಂಧುದುರ್ಗ ಜಿಲ್ಲೆಯ ಅರೇಬಿಯನ್ ಸಮುದ್ರದಲ್ಲಿ ಒಂದೇ ಕುಟುಂಬದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅವರೊಂದಿಗೆ ಸಮುದ್ರಕ್ಕೆ ಇಳಿದಿದ್ದ ಇತರ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ 4 ಗಂಟೆ ಸುಮಾರಿಗೆ 8 ಜನರ ಕುಟುಂಬವೊಂದು ಪಿಕ್ನಿಕ್‌ಗೆ ಹೋಗಿದ್ದಾಗ ಶಿರೋಡಾ-ವೇಲಗರ್ ಬೀಚ್‌ನಲ್ಲಿ ಈ ಘಟನೆ ನಡೆದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅವರಲ್ಲಿ ಇಬ್ಬರು ಕುಡಾಲ್ (ಸಿಂಧುದುರ್ಗ) ಮೂಲದವರಾಗಿದ್ದರೆ, ಇತರ 6 ಮಂದಿ ಕರ್ನಾಟಕದ ಬೆಳಗಾವಿಯಿಂದ ಬಂದಿದ್ದರು.
ಈ 8 ಮಂದಿಯೂ ಈಜಲು ಸಮುದ್ರಕ್ಕೆ ಇಳಿದರು. ಆದರೆ, ಸ್ವಲ್ಪ ಸಮಯದ ನಂತರ ನೀರಿನ ಆಳ ಗೊತ್ತಾಗದೆ ಅವರು ಮುಳುಗಲು ಪ್ರಾರಂಭಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವಿಷಯ ತಿಳಿದ ನಂತರ ಪೊಲೀಸರು ಮತ್ತು ಸ್ಥಳೀಯ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಶೋಧದ ಸಮಯದಲ್ಲಿ 3 ಶವಗಳು ಪತ್ತೆಯಾಗಿದ್ದು, ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ.
ಹಾಗೇ, ನೀರಿನಲ್ಲಿ ಮುಳುಗಿದ್ದ 16 ವರ್ಷದ ಬಾಲಕಿಯನ್ನು ರಕ್ಷಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ರಕ್ಷಣಾ ತಂಡಗಳು ಸಂಜೆಯಿಂದ ಉಳಿದವರಿಗಾಗಿ ಹುಡುಕಾಟ ಮುಂದುವರೆಸಿವೆ.
For More Updates Join our WhatsApp Group :
