ದಿನಪೂರ್ತಿ ದಣಿವು? ಸಾಮಾನ್ಯ ಪರೀಕ್ಷೆಗಳ ವರದಿ ನಾರ್ಮಲ್ ಬಂದರೂ alert ಅಗತ್ಯ.

ದಿನಪೂರ್ತಿ ದಣಿವು? ಸಾಮಾನ್ಯ ಪರೀಕ್ಷೆಗಳ ವರದಿ ನಾರ್ಮಲ್ ಬಂದರೂ alert ಅಗತ್ಯ.

ಸಾಮಾನ್ಯ ವೈದ್ಯಕೀಯ ಪರೀಕ್ಷೆಗಳ ವರದಿ ನಾರ್ಮಲ್ ಇದ್ದರೂ ದಿನಪೂರ್ತಿ ದಣಿವೇ?

ತುಂಬಾ ಸುಸ್ತು ಎನ್ನುವುದು ಇತ್ತೀಚೆಗೆ ಸಾಮಾನ್ಯವಾಗಿ ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುವ ಮಾತು. ಬಹುತೇಕ ಜನರಿಗೆ ದಿನಪೂರ್ತಿ ದಣಿವು ಕಾಣಿಸಿಕೊಂಡರೆ, ಇನ್ನು ಕೆಲ ಮಂದಿಗೆ ಇದು ಅಲ್ಪಕಾಲಿಕವಾಗಿ ಅನುಭವಕ್ಕೆ ಬಂದಿರುತ್ತದೆ. ಹೀಗಾಗಿ ಕೆಲಸ ಮಾಡಲು ಮನಸ್ಸಾಗುವುದಿಲ್ಲ ಮತ್ತು ಸಣ್ಣ ಕೆಲಸಗಳೂ ಕಷ್ಟವಾಗುತ್ತವೆ ಎಂಬ ಕಾರಣಕ್ಕೆ ಜನರು ಬ್ಲಡ್ ಟೆಸ್ಟ್, ಥೈರಾಯ್ಡ್, ಶುಗರ್ ಹಾಗೂ ವಿಟಮಿನ್ B12 ಮತ್ತು D ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಅವುಗಳ ವರದಿ ನಾರ್ಮಲ್ ಬಂದರೂ ದಣಿವು ಕಡಿಮೆಯಾಗುವುದಿಲ್ಲ. ಬಹುಪಾಲು ಜನರು ಇದನ್ನು ಸಾಮಾನ್ಯ ದೌರ್ಬಲ್ಯವೆಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ದೇಹದ ಈ ಲಕ್ಷಣಗಳ ಹಿಂದೆ ಆರೋಗ್ಯ ಸಮಸ್ಯೆಗಳು ಇರಬಹುದು. ಸಮಯಕ್ಕೆ ಗಮನ ಕೊಡದಿದ್ದರೆ ದೀರ್ಘಕಾಲ ಸಮಸ್ಯೆಯಾಗಬಹುದು.

ದಿನಪೂರ್ತಿ ದಣಿವಿಗೆ ಇವೂ ಕಾರಣ ಆಗಿರಬಹುದು

ಕ್ರೋನಿಕ್ ಫ್ಯಾಟಿಗ್ ಸಿಂಡ್ರೋಮ್ಈ ಸ್ಥಿತಿಯಲ್ಲಿ ವ್ಯಕ್ತಿಗೆ ದೀರ್ಘಕಾಲದ ದಣಿವು ಇರುತ್ತದೆ. ವಿಶ್ರಾಂತಿ ತೆಗೆದುಕೊಂಡರೂ ದಣಿವು ಹೋಗುವುದಿಲ್ಲ. ನಿದ್ರೆಯಾದರೂ ಫ್ರೆಶ್ ಅನಿಸದು, ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ.

ಸ್ಲೀಪ್ ಅಪ್ನಿಯಾನಿದ್ರೆಯ ಸಮಯದಲ್ಲಿ ಉಸಿರಾಟಕ್ಕೆ ಮತ್ತೆ ಮತ್ತೆ ತೊಂದರೆ ಆಗುವುದು ಈ ರೋಗದ ಲಕ್ಷಣ. ಇದರಿಂದ ನಿದ್ರೆ ಸಂಪೂರ್ಣವಾಗುವುದಿಲ್ಲ. ದಿನಪೂರ್ತಿ ನಿದ್ರೆ ಬರುವುದು, ತಲೆನೋವು ಮತ್ತು ದಣಿವು ಮುಂದುವರಿಯುತ್ತದೆ.

ಹಾರ್ಮೋನ್ಅಸಮತೋಲನಥೈರಾಯ್ಡ್ ಸೇರಿದಂತೆ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾದರೆ ದೇಹದ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ದಣಿವು, ಮನೋಭಾವದ ಬದಲಾವಣೆ (ಮೂಡ್ ಸ್ವಿಂಗ್) ಮತ್ತು ತೂಕದಲ್ಲಿ ಬದಲಾವಣೆ ಕಾಣಬಹುದು.

ಮಾನಸಿಕ ಆರೋಗ್ಯ ಸಮಸ್ಯೆಗಳುಡಿಪ್ರೆಶನ್ ಮತ್ತು ಆಂಕ್ಸೈಟಿ ರೀತಿಯ ಸಮಸ್ಯೆಗಳು ದೇಹವನ್ನು ದಣಿಗೊಳಿಸುತ್ತವೆ. ಮನಸ್ಸಿನ ಒತ್ತಡದಿಂದ ದೇಹದಲ್ಲಿ ಎನರ್ಜಿ ಕಡಿಮೆಯಾಗುತ್ತದೆ ಮತ್ತು ನಿರಂತರ ದಣಿವು ಉಂಟಾಗುತ್ತದೆ.

ಸಾಕಷ್ಟು ನಿದ್ರೆ ಮಾಡಿದರೂ ದಣಿವು ಕಡಿಮೆಯಾಗದಿರುವುದು, ಗಮನ ಕೇಂದ್ರೀಕರಿಸಲು ಕಷ್ಟವಾಗುವುದು ಈ ರೀತಿಯ ಆರೋಗ್ಯ ಸಮಸ್ಯೆಯ ಪ್ರಮುಖ ಲಕ್ಷಣ ತಲೆನೋವಿನ ಜೊತೆಗೆ, ದೇಹ ಭಾರವಾಗಿರುವ ಅನುಭವವೂ ಕೆಲವರಲ್ಲಿ ಕಂಡುಬರುತ್ತದೆ. ನಿದ್ರೆಯ ವೇಳೆ ಗೊರಕೆ ಹೊಡೆಯುವುದು ಅಥವಾ ಬೆಳಗ್ಗೆ ಎದ್ದರೂ ತಾಜಾತನ ಕಾಣಿಸದಿರುವುದು ಕೂಡ ಸಾಮಾನ್ಯ ಲಕ್ಷಣಗಳೆಂದೇ ಪರಿಗಣಿಸಲ್ಪಟ್ಟಿವೆ. ಇವುಗಳ ಪೈಕಿ ಯಾವುದೇ ಆರೋಗ್ಯ ಲಕ್ಷಣಗಳು ದೀರ್ಘಕಾಲ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *