ಇಂದು ವಿಶ್ವ ಕ್ಷೀರ ದಿನ…!

ಪ್ರತಿವರ್ಷ ಜೂನ್‌ 1 ರಂದು ವಿಶ್ವ ಕ್ಷೀರದಿನವನ್ನಾಗಿ ಆಚರಿಸಲಾಗುತ್ತದೆ. ಅಮೆರಿಕದ ಆಹಾರ ಹಾಗೂ ಕೃಷಿ ಸಂಸ್ಥೆ 2001ರಲ್ಲಿ ಈ ದಿನದ ಆಚರಣೆಯನ್ನು ಆರಂಭಿಸಿತ್ತು. ಪ್ರಪಂಚದಾದ್ಯಂತದ ಜನರಿಗೆ ಡೈರಿಯ ಪ್ರಯೋಜನಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಈ ದಿನದಂದು ಹಾಲನ್ನು ಯಾವೆಲ್ಲ ರೀತಿಯಲ್ಲಿ ನಮ್ಮ ಡಯೆಟ್‌ಕ್ರಮದಲ್ಲಿ ಸೇರಿಸಬಹುದು, ಹಾಲು ಸೇರಿಸಿ ಮಾಡಲಾಗುವ ರುಚಿಗಳ ಖಾದ್ಯ, ಪಾನೀಯಗಳು ಯಾವುವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಎಚ್‌ಟಿ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಬೆಂಗಳೂರಿನ ಪೌಷ್ಟಿಕತಜ್ಞೆ ಅನುಪಮಾ ಮೆನನ್‌.

ಬಾಯಲ್ಲಿ ನೀರೂರಿಸುವ ಸ್ಮೂಥಿಯಿಂದ, ರುಚಿಕರ ಪನೀರ್‌ ರೆಸಿಪಿವರೆಗೆ ಡೇರಿ ಉತ್ಪನ್ನವಾದ ಹಾಲನ್ನು ಆನಂದಿಸಲು ಹಲವಾರು ಮಾರ್ಗಗಳಿವೆ. ಹಾಲು ಅಥವಾ ಡೇರಿ ಉತ್ಪನ್ನಗಳಿಂದ ತಯಾರಿಸಬಹುದಾದ ರುಚಿಕರ ಆಹಾರಗಳ ಪಟ್ಟಿಯನ್ನು ಮೆನನ್‌ ಇಲ್ಲಿ ಹಂಚಿಕೊಂಡಿದ್ದಾರೆ. 

ಸ್ಮೂಥಿ

ಮೊಸರು, ತಾಜಾಹಣ್ಣುಗಳು ಮತ್ತು ಬಾದಾಮಿ ಅಥವಾ ಪೀಟರ್‌ನಟ್‌ ಬಟರ್‌ ಸೇರಿಸಿ ರುಬ್ಬಿ ತಯಾರಿಸುವ ಒಂದು ಪೌಷ್ಟಿಕ ಪಾನೀಯ. ಇದು ಪೋಷಕಾಂಶ ಸಮೃದ್ಧವಾಗಿದ್ದು, ಇದರ ರುಚಿಗೂ ಸಾಟಿಯಿಲ್ಲ. ಇದನ್ನು ಬೇಸಿಗೆಯಲ್ಲಿ ಮಾತ್ರವಲ್ಲದೇ ಬೇರೆ ದಿನಗಳನ್ನೂ ಕುಡಿಯಬಹುದು.

ಲ್ಯಾಟೆ

ಒಂದು ಲೋಟ ಹಾಲಿಗೆ ಪರಿಮಳ ಸೂಸುವ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ಲ್ಯಾಟೆ ತಯಾರಿಸಿ ಕುಡಿಯುವುದರಿಂದ ಹಿತವಾದ ನಿದ್ದೆಗೆ ಸಹಕಾರಿ. ಹಾಲಿಗೆ 3 ರಿಂದ 4 ಕೇಸರಿ ದಳಗಳನ್ನು ಹಾಕಿ ಕುದಿಸಿ, ನಂತರ ಅದಕ್ಕೆ ದಾಲ್ಚಿನ್ನಿ ಕಾಲು ಟೀ ಚಮಚ ಹಾಗೂ ಕಾಲು ಟೀ ಚಮಚ ಅರಿಸಿನ, ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಇದು ಪರಿಮಳ ಭರಿತ ಮಾತ್ರವಲ್ಲ, ಹಲವು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ.

ಓಟ್ಸ್ರೆಸಿಪಿ

ಡೇರಿ ಉತ್ಪನ್ನಗಳೊಂದಿಗೆ ತಯಾರಿಸಿದ ಓಟ್ಸ್‌ ಮೀಲ್ಸ್‌ ಪೌಷ್ಟಿಕ ಆಹಾರವಾಗಿದೆ. 3 ಚಮಚ ಓಟ್ಸ್‌, ಅರ್ಧ ಕಪ್‌ ಮೊಸರು, 4 ಚಮಚ ವಿವಿಧ ಹಣ್ಣುಗಳು, 4 ರಿಂದ 5 ಚಮಚ ಹುರಿದ ಬೀಜಗಳು ಹಾಗೂ 2 ಟೀ ಚಮಚ ಡಾರ್ಕ್‌ ಚಾಕೊಲೇಟ್‌ ಚಿಪ್ಸ್‌ ಅನ್ನು ಮಿಶ್ರಣ ಮಾಡಿ ರಾತ್ರಿ ಫ್ರಿಜ್‌ನಲ್ಲಿ ಇಡಿ. ಬೆಳಿಗ್ಗೆ ರುಚಿಕರವಾದ ಮತ್ತು ಆರೋಗ್ಯಕರವಾದ ಈ ತಿನಿಸನ್ನು ಸವಿಯಿರಿ.

ಟೊಮೆಟೊ, ಬಾಸಿಲ್ಸೂಪ್

ನಿಮ್ಮ ಊಟದೊಂದಿಗೆ ಇನ್ನಷ್ಟು ರುಚಿ ಸೇರಿಸಬಹುದು ಎಂದರೆ ಚೀಸ್‌ ಹಾಗೂ ತರಕಾರಿನಿಂದ ಮಾಡಿದ ಸೂಪ್‌ ಕುಡಿಯಬಹುದು. ತಾಜಾ ತರಕಾರಿಗಳನ್ನು ಹುರಿದುಕೊಂಡು ಸೂಪ್‌ ತಯಾರಿಸುವುದರಿಂದ ಇದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಟೊಮೆಟೊ ಸೂಪ್‌ ಜೊತೆಗೂ ಚೀಸ್‌ ಸೇರಿಸಿ ತಿನ್ನಬಹುದು.

ಪನೀರ್ರೆಸಿಪಿಗಳು

ಟೊಮೆಟೊ, ಲೆಟಿಸ್‌ ಅಥವಾ ಬದನೆಕಾಯಿಯಂತಹ ತರಕಾರಿ ಚೂರುಗಳ ಮೇಲೆ ಮಸಾಲೆಭರಿತ ಪನೀರ್‌ ಅನ್ನು ತುರಿದ ಲೇಯರ್‌ ಅದರ ಮೇಲೆ ಚಿಮುಕಿಸಿಕೊಂಡು ತಿನ್ನಬಹುದು. ಸಂಜೆ ಸ್ನಾಕ್ಸ್‌ ಜೊತೆಗೂ ಪನೀರ್‌ ಸೇರಿಸಿದ ಖಾದ್ಯಗಳನ್ನು ಮಾಡಬಹುದು. ಪನೀರ್‌ ಸಾಕಷ್ಟು ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕ್ಕೆ ಉತ್ತಮ.

Pragati TV Social Connect for more latest u

Leave a Reply

Your email address will not be published. Required fields are marked *