ಕರ್ನಾಟಕದ 9 ಹೆದ್ದಾರಿಗಳಲ್ಲಿ ಏಪ್ರಿಲ್ 1 ರಿಂದ ಟೋಲ್ ದರ ಶೇ 5ರಷ್ಟು ಹೆಚ್ಚಳ
ಬೆಂಗಳೂರು : ಹೊಸ ಹಣಕಾಸು ವರ್ಷದ ಆರಂಭದ ದಿನವೇ ವಾಹನ ಸವಾರರಿಗೆ ದೊಡ್ಡ ಶಾಕ್ ಎದುರಾಗಿದೆ. ಏಪ್ರಿಲ್ 1 ಬುಧವಾರದಿಂದ ಜಾರಿಗೆ ಬರುವಂತೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಯಾಣ ಶುಲ್ಕವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತೀರ್ಮಾನಿಸಿದೆ. ಇದರಿಂದಾಗಿ ಕರ್ನಾಟಕದ ಪ್ರಮುಖ 9 ಹೆದ್ದಾರಿಗಳಲ್ಲಿ ಸಂಚಾರ ನಡೆಸುವ ಕಾರು, ಬಸ್ ಮತ್ತು ಲಾರಿಗಳ ಟೋಲ್ ದರದಲ್ಲಿ ಶೇ 4 ರಿಂದ 5 ರಷ್ಟು ಏರಿಕೆಯಾಗಲಿದೆ.
ಟೋಲ್ ವಾರ್ಷಿಕ ಪಾಸ್ ದರವೂ ಏರಿಕೆ!
ರಾಜ್ಯದ ಆರ್ಥಿಕ ಜೀವನಾಡಿಗಳಂತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ಬೆಂಗಳೂರು-ತುಮಕೂರು, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಹಾಸನ ಸೇರಿದಂತೆ ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೊಸ ದರ ಅನ್ವಯವಾಗಲಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದೆಲ್ಲಾ ವರ್ಗದ ವಾಹನಗಳಿಗೆ ಈ ಹೊರೆ ತಟ್ಟಲಿದೆ. ವಿಶೇಷವೆಂದರೆ ವಾರ್ಷಿಕ ಪಾಸ್ ದರವೂ ಸಹ ಏರಿಕೆಯಾಗಲಿದ್ದು, 3,000 ರೂ. ಇದ್ದ ಶುಲ್ಕ ಈಗ 3,075 ರೂ.ಗೆ ಏರಲಿದೆ.
ಯಾವೆಲ್ಲ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಳ?
- ರಾಷ್ಟ್ರೀಯ ಹೆದ್ದಾರಿ 48: ಬೆಂಗಳೂರು – ತುಮಕೂರು-ಹಾವೇರಿ-ಬೆಳಗಾವಿ-ಮುಂಬೈ
- ರಾಷ್ಟ್ರೀಯ ಹೆದ್ದಾರಿ 275: ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇ
- ರಾಷ್ಟ್ರೀಯ ಹೆದ್ದಾರಿ 44: ಬೆಂಗಳೂರು – ಹೈದರಾಬಾದ್
- ರಾಷ್ಟ್ರೀಯ ಹೆದ್ದಾರಿ – 75 ಬೆಂಗಳೂರು- ಹಾಸನ- ಮಂಗಳೂರು
- ರಾಷ್ಟ್ರೀಯ ಹೆದ್ದಾರಿ 75: ಬೆಂಗಳೂರು-ಹೊಸಕೋಟೆ-ಕೋಲಾರ
- ರಾಷ್ಟ್ರೀಯ ಹೆದ್ದಾರಿ 66: ಮಂಗಳೂರು-ಉಡುಪಿ-ಕುಂದಾಪುರ
- ರಾಷ್ಟ್ರೀಯ ಹೆದ್ದಾರಿ 50/52: ವಿಜಯಪುರ-ಹೊಸಪೇಟೆ-ಚಿತ್ರದುರ್ಗ
- ರಾಷ್ಟ್ರೀಯ ಹೆದ್ದಾರಿ 150A: ಹಿರಿಯೂರು-ಬಳ್ಳಾರಿ-ಜೇವರ್ಗಿ
- ರಾಷ್ಟ್ರೀಯ ಹೆದ್ದಾರಿ 766 ಮೈಸೂರು ಟು ಗುಂಡ್ಲಪೇಟೆ
For More Updates Join our WhatsApp Group :



