Tollywood || ಕಿಡ್ನಿ ವೈಫಲ್ಯದಿಂದ ಖ್ಯಾತ ಖಳನಟ ಫಿಶ್ ವೆಂಕಟ್‌ ನಿಧನ

ತೆಲುಗು ಚಿತ್ರರಂಗದಲ್ಲಿ ಖಳನಾಯಕನ ಪಾತ್ರದ ಜೊತೆಗೆ ಹಾಸ್ಯ ಕಲಾವಿದರಾಗಿ ಕಾಣಿಸಿಕೊಂಡಿದ್ದ ಫಿಶ್ ವೆಂಕಟ್‌ ನಿನ್ನೆ (ಜುಲೈ 18) ರಾತ್ರಿ ನಿಧನರಾಗಿದ್ದಾರೆ. ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ಫಿಶ್ ವೆಂಕಟೇಶ್ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ

ಫಿಶ್ ವೆಂಕಟೇಶ್ ಅವರ ಮೂಲಕ ಹೆಸರು ಮಂಗಳಂಪಲ್ಲಿ ವೇಂಕಟೇಶ್. ಚಿತ್ರರಂಗದಲ್ಲಿ ಫಿಶ್ ವೆಂಕಟೇಶ್ ಅಂತಲೇ ಫೇಮಸ್ ಆಗಿದ್ದವರು. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಹೊಂದಿದ್ದಾರೆ ಫಿಶ್ ವೆಂಕಟೇಶ್.

ಇತ್ತೀಚೆಗೆ ಆರೋಗ್ಯದ ಸ್ಥಿತಿ ಗಂಭೀರವಾದ ಹಿನ್ನೆಲೆ ಎರಡೂ ಕಿಡ್ನಿಯನ್ನ ಕಸಿ ಮಾಡಲು ವೈದ್ಯರು ಸಲಹೆಯನ್ನ ನೀಡಲಾಗಿ ಅದಕ್ಕಾಗಿ ನಟ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆರ್ಥಿಕ ನೆರವನ್ನ ನೀಡಿದ್ದರು. ಅಲ್ಲದೇ ವೆಂಕಟೇಶ್ ಕುಟುಂಬಸ್ಥರು ಮೂತ್ರಪಿಂಡ ದಾನಿಗಳ ಮೊರೆ ಹೋಗಿದ್ದರು. ಅಷ್ಟರಲ್ಲೇ ಫಿಶ್ ವೆಂಕಟೇಶ್ 53ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ನಟನ ಸಾವಿಗೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ.

ಮಂಗಳಂಪಲ್ಲಿ ವೇಂಕಟೇಶ್ ಹೈದರಾಬಾದ್‌ನ ಮುಶೀರಾಬಾದ್ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ಕಾರಣ ಅವರಿಗೆ ಫಿಶ್ ವೆಂಕಟೇಶ್ ಎಂದು ಹೆಸರು ಬಂದಿದೆ. ನಟ ಶ್ರೀಹರಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆದಿ, ದಿಲ್, ಬನ್ನಿ, ಅತ್ತಾರಿಂಟಿಕಿ ದಾರೇದಿ, ಡಿಜೆ ಟಿಲ್ಲು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ ಫಿಶ್ ವೆಂಕಟೇಶ್

Leave a Reply

Your email address will not be published. Required fields are marked *