Tomato price hike: ಮುಂದಿನ ಎರಡ್ಮೂರು ತಿಂಗಳು ಟೊಮೆಟೊ ಬೆಲೆ ಹೆಚ್ಚಾಗಲಿದೆಯಂತೆ..ಯಾಕೆ ಗೊತ್ತಾ???

ಬೆಂಗಳೂರು: ಮುಂದಿನ ಎರಡು ಮೂರು ತಿಂಗಳವರೆಗೆ ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೆ ಟೊಮೇಟೊ ಬೆಲೆ ಹೆಚ್ಚಿರುವ ಸಾಧ್ಯತೆ ಇದೆ. ಪೂರೈಕೆಯ ಕೊರತೆಯಿಂದಾಗಿ ಇತ್ತೀಚಿನ ವಾರಗಳಲ್ಲಿ ಟೊಮೆಟೊ ಬೆಲೆ 400% ಹೆಚ್ಚಾಗಿದೆ. ಇತ್ತೀಚಿನ ವಾರಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 40 ರಿಂದ 200 ರೂ. ಆಗಿತ್ತು.

ಟೊಮೆಟೊ

ಮಂಗಳವಾರದ ವೇಳೆಗೆ, ಕರ್ನಾಟಕದಾದ್ಯಂತ ಪ್ರತಿ ಕೆಜಿ ಟೊಮೆಟೊ ಬೆಲೆ ಕೆಜಿಗೆ 160 ರಿಂದ 200 ರೂ. ಆಗಿದೆ. ಹೊಸ ಬೆಳೆಗಳು ಮಾರುಕಟ್ಟೆಗೆ ಬರುವವರೆಗೆ ಮುಂದಿನ ಎರಡು ಮೂರು ತಿಂಗಳವರೆಗೆ ಟೊಮ್ಯಾಟೊ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಟೊಮೇಟೊ ಕೊರತೆ ಮತ್ತು ಮಳೆಯ ಹಠಾತ್ ಹೆಚ್ಚಳವು ಬೆಳೆಯ ಇಳುವರಿ ಕಳಪೆಯಾಗಿದೆ. ಹಾಗಾಗಿ ಬೆಲೆ ಹೆಚ್ಚಾಗಿದೆ ಎನ್ನುತಿದ್ದಾರೆ ರೈತರು.ಉತ್ತರ ಪ್ರದೇಶ, ದೆಹಲಿ ಮತ್ತು ಛತ್ತೀಸ್‌ಗಢದಲ್ಲಿ ಟೊಮೆಟೊ ಉತ್ಪಾದನೆಯಲ್ಲಿ ಇಳಿಕೆ ಮುಖ ಕಂಡಿದೆ. ಕರ್ನಾಟಕದಿಂದ ಇತರ ರಾಜ್ಯಗಳಿಗೆ ಟೊಮೆಟೊ ರಫ್ತು ಹೆಚ್ಚಿಸಲಾಗಿದೆ. ಇದೇ ಬೆಲೆ ಏರಿಕೆ ಕಾರಣ ಎಂದಿದ್ದಾರೆ.

ಆಷಾಢ ಮಾಸದಲ್ಲಿ (ಜೂನ್-ಜುಲೈ ತಿಂಗಳುಗಳಲ್ಲಿ ಆಷಾಢ ಮಾಸ ಬರುತ್ತದೆ) ಟೊಮೆಟೊಗೆ ಬೇಡಿಕೆ ಕಡಿಮೆಯಾದ ಕಾರಣ ರೈತರು ಕಡಿಮೆ ಟೊಮ್ಯಾಟೊ ಬೆಳೆಯುವ ಅಭ್ಯಾಸವನ್ನು ಹೊಂದಿದ್ದಾರೆ. ಈ ತಿಂಗಳು ಮದುವೆ ಮತ್ತಿತರ ಕಾರ್ಯಕ್ರಮಗಳು ನಡೆಯದ ಕಾರಣ ಈ ತಿಂಗಳಲ್ಲಿ ತರಕಾರಿಗೆ ಬೇಡಿಕೆ ಕಡಿಮೆಯಾಗಲಿದೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *