ರುಚಿ ಸರಿಪಡಿಸಲು ಇಲ್ಲಿವೆ ಸರಳ ಟಿಪ್ಸ್.
ಅಡುಗೆಯ ರುಚಿ ಹೆಚ್ಚಿಸುವಲ್ಲಿ ಉಪ್ಪಿನ ಪಾತ್ರ ಬಹಳ ದೊಡ್ಡದು. ಅದೇ ಒಂದು ವೇಳೆ ಸ್ವಲ್ಪ ಉಪ್ಪು ಜಾಸ್ತಿ ಆದ್ರೂ ಸಹ ಅಡುಗೆಯ ರುಚಿಯೇ ಕೆಟ್ಟು ಹೋಗುತ್ತದೆ. ಈ ರೀತಿ ಉಪ್ಪು ಜಾಸ್ತಿಯಾದಾಗ ಅಯ್ಯೋ ಕಷ್ಟಪಟ್ಟು ಮಾಡಿದ ಅಡುಗೆಯೆಲ್ಲಾ ವೇಸ್ಟ್ ಆಯ್ತಲ್ವಾ ಎಂದು ಹಲವರು ಟೆನ್ಷನ್ ಮಾಡ್ಕೊಳ್ಳುತ್ತಾರೆ. ಅಡುಗೆಗೆ ಉಪ್ಪು ಹೆಚ್ಚಾದ್ರೆ ಈ ರೀತಿ ಟೆನ್ಷನ್ ಮಾಡುವ ಯಾವುದೇ ಅವಶ್ಯಕತೆ ಇಲ್ಲ, ಜಸ್ಟ್ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ರುಚಿಯನ್ನು ಸರಿದೂಗಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಡುಗೆಗೆ ಉಪ್ಪು ಜಾಸ್ತಿ ಆದ್ರೆ ಏನು ಮಾಡಬೇಕು?
ಮೊಸರು ಸೇರಿಸಿ: ಉಪ್ಪು ಜಾಸ್ತಿಯಾಗಿ ಅಡುಗೆಯ ರುಚಿ ಕೆಟ್ಟು ಹೋದರೆ ರುಚಿಯನ್ನು ಸರಿದೂರಿಸಲು ನೀವು ಅಡುಗೆಗೆ ಮೊಸರನ್ನು ಸೇರಿಸಬಹುದು. ಅಡುಗೆಗೆ ಎರಡು ಚಮಚ ಮೊಸರು ಸೇರಿಸಿ ಎರಡು ನಿಮಿಷ ಬೇಯಿಸಿ. ಇದು ಉಪ್ಪಿನ ಅಂಶವನ್ನು ಸಮತೋಲನಗೊಳಿಸುತ್ತದೆ ಮತ್ತು ಅಡುಗೆಯ ರುಚಿಯನ್ನು ಸುಧಾರಿಸುತ್ತದೆ.
ಕಡಲೆ ಹಿಟ್ಟು: ನೀವು ಹುರಿದ ಕಡಲೆ ಹಿಟ್ಟನ್ನು ಸಹ ಬಳಸಬಹುದು. ನೀವು ಮಾಡಿದ ಅಡುಗೆಯಲ್ಲಿ ಉಪ್ಪು ಹೆಚ್ಚು ಇದ್ದರೆ, ಅದಕ್ಕೆ ಹುರಿದ ಕಡಲೆ ಹಿಟ್ಟನ್ನು ಸೇರಿಸಿ. ಇದು ಹೆಚ್ಚುವರಿ ಉಪ್ಪನ್ನು ಸಮತೋಲನಗೊಳಿಸುತ್ತದೆ ಮತ್ತು ಅಡುಗೆಯ ರುಚಿಯನ್ನು ಸುಧಾರಿಸುತ್ತದೆ.
ಬೇಯಿಸಿದ ಆಲೂಗಡ್ಡೆ: ಬೇಯಿಸಿದ ಆಲೂಗಡ್ಡೆಯನ್ನು ಬಳಸುವ ಮೂಲಕ ಅಡುಗೆಯಲ್ಲಿನ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಉಪ್ಪು ಹೆಚ್ಚಾಗಿ ರುಚಿ ಕೆಟ್ಟಿದ್ದರೆ ಬೇಯಿಸಿದ ಆಲೂಗಡ್ಡೆಯನ್ನು ಕಟ್ ಮಾಡಿ, ನೀವು ತಯಾರಿಸಿಟ್ಟ ಅಡುಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದು ಉಪ್ಪಿನಾಂಶವನ್ನು ಹೀರಿಕೊಳ್ಳುತ್ತದೆ. ಹಸಿ ಆಲೂಗಡ್ಡೆಯ ತುಂಡನ್ನು ಸಹ ಸೇರಿಸಬಹುದು.
ನಿಂಬೆ ರಸ: ಅಡುಗೆಯಲ್ಲಿ ಉಪ್ಪು ಹೆಚ್ಚಾಗಿದ್ದರೆ ಅದನ್ನು ಸಮತೋಲನಗೊಳಿಸಲು ನಿಂಬೆ ರಸ ಕೂಡ ಸಹಕಾರಿಯಾಗಿದೆ. ಹೌದು ಉಪ್ಪು ಜಾಸ್ತಿಯಾದ್ರೆ ಅಡುಗೆಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ ಚೆನ್ನಾಗಿ ವಿಶ್ರಣ ಮಾಡಿ. ಇದು ಹೆಚ್ಚಾದ ಉಪ್ಪಿನಾಂಶವನ್ನು ಸಮತೋಲನಗೊಳಿಸುತ್ತದೆ.
ತೆಂಗಿನ ಹಾಲು: ನೀವು ಮಾಡಿದ ಗ್ರೇವಿಯ ಉಪ್ಪು ಜಾಸ್ತಿ ಆದ್ರೆ ಅದಕ್ಕೆ ತೆಂಗಿನ ಹಾಲನ್ನು ಸೇರಿಸಬಹುದು. ತೆಂಗಿನ ಹಾಲಿನೊಂದಿಗೆ ಸ್ವಲ್ಪ ನೀರು ಬೆರೆಸಿ ಗ್ರೇವಿಗೆ ಸೇರಿಸಿ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚುವರಿ ಉಪ್ಪನ್ನು ಸಮತೋಲನಗೊಳಿಸುತ್ತದೆ.
ಸಕ್ಕರೆ: ಅಡುಗೆಗೆ ಉಪ್ಪು ಹೆಚ್ಚಾದರೆ ಅದಕ್ಕೆ ಸ್ವಲ್ಪ ಸಕ್ಕರೆ ಅಥವಾ ಬೆಲ್ಲ ಸೇರಿಸಿ. ಸಕ್ಕರೆಯ ಸಿಹಿಯು ಉಪ್ಪಿನ ಪ್ರಮಾಣವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ.
For More Updates Join our WhatsApp Group :




