ಮಾರ್ಚ್ 19ರಂದು ಚಿತ್ರದ ಮಹತ್ವದ ಬಿಡುಗಡೆ, ಯಶ್ ಹೊಸ ಮಾದರಿಯ ಪ್ರಚಾರ.
‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮಾರ್ಚ್ 19ರಂದು ಆಗಲಿದೆ, ಸಿನಿಮಾದ ಬಿಡುಗಡೆಗೆ ಒಂದು ವಾರದ ಹಿಂದಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಮಾರ್ಚ್ ಮೊದಲ ವಾರದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಬಿಡುಗೆಡ ಆಗಿರುವ ಟೀಸರ್ಗಿಂತಲೂ ಸಖತ್ ಪವರ್ಫುಲ್ ಆಗಿರಲಿದೆಯಂತೆ ಸಿನಿಮಾದ ಟ್ರೈಲರ್.
‘ಟಾಕ್ಸಿಕ್’ ಸಿನಿಮಾದ ಹಕ್ಕುಗಳ ಮಾರಾಟ ಚಾಲ್ತಿಯಲ್ಲಿದ್ದು, ಆಂಧ್ರ-ತೆಲಂಗಾಣ, ಉತ್ತರ ಭಾರತ, ವಿದೇಶದ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಆಂಧ್ರ-ತೆಲಂಗಾಣದಲ್ಲಂತೂ ‘ಟಾಕ್ಸಿಕ್’ ಸಿನಿಮಾ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಸಿನಿಮಾದ ಹಕ್ಕುಗಳ ಖರೀದಿ ಮಾಡಿದ್ದಾರೆ.
For More Updates Join our WhatsApp Group :



