ಫ್ಯಾನ್ಸ್ಗೆ ಡಬಲ್ ಧಮಾಕಾ ಕೊಟ್ಟ ಯಶ್.
ಟಾಕ್ಸಿಕ್’ ಟ್ರೇಲರ್ ಬಗ್ಗೆ ಚರ್ಚೆ ನಡೆಯುವಾಗಲೇ ಸಿನಿಮಾದ ಟೀಸರ್ ಇಂದು (ಫೆ.20) ಬಿಡುಗಡೆ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಹೇಗಿರದಬಹುದು ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ. ಯಶ್ ಅವರ ಎದುರು ಬಂದವರು ಉಡೀಸ್ ಆಗುವ ಸೂಚನೆ ಟೀಸರ್ ನೋಡಿದವರಿಗೆ ಸಿಕ್ಕಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್ಗಿಂತ ಈ ಟೀಸರ್ ತುಂಬಾನೇ ಭಿನ್ನವಾಗಿದೆ. ಯಶ್ ಅವರ ರಾ ಲುಕ್ ಗಮನ ಸೆಳೆದಿದೆ. ಟೀಸರ್ನಲ್ಲಿ ಇರುವ ಅಂಶಗಳೇನು ಎಂಬುದರ ವಿವರ ಇಲ್ಲಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್ನಲ್ಲಿ ಯಶ್ ಯಂಗ್ ಲುಕ್ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಯಶ್ ಅವರು ಸಖತ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಸಾಕಷ್ಟು ರಕ್ತ ಕೂಡ ಹರಿದಿದೆ.
‘ಈ ಸಲ ಯುದ್ಧನೇ ಬೇರೆ’ ಎಂಬ ಡೈಲಾಗ್ ಗಮನ ಸೆಳೆದಿದೆ. ‘ಟಾಕ್ಸಿಕ್’ ಟೀಸರ್ ನೋಡಿದವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಹಠ ಬಿಡೋ ಮಾತೇ ಇಲ್ಲ’ ಎಂಬುದನ್ನು ಯಶ್ ಸ್ಪಷ್ಟವಾಗಿ ಹೇಳಿದ್ದಾರೆ. ಇದು ‘ಧುರಂದರ್ 2’ ಚಿತ್ರಕ್ಕೆ ಕೊಟ್ಟ ಕೌಂಟರ್ ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಈ ಮೊದಲು ರಿಲೀಸ್ ಆದ ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಲ್ಚಲ್ ಎಬ್ಬಿಸಿತ್ತು. ಲೈಂಗಿಕ ಕ್ರಿಯೆ ನಡೆಸೋ ದೃಶ್ಯವನ್ನು ಟೀಸರ್ನಲ್ಲಿ ತೋರಿಸಿದ್ದು ಅನೇಕರ ಕೋಪಕ್ಕೆ ಕಾರಣ ಆಯಿತು. ಈ ಸಂಬಂಧ ದೂರು ಕೂಡ ದಾಖಲಾಯಿತು. ಆದರೆ, ಅವ್ಯಾವುದು ಟ್ರೇಲರ್ನ ತಡೆಯಲಿಲ್ಲ. ಚಿತ್ರದ ಟೀಸರ್ ಯೂಟ್ಯೂಬ್ ಒಂದರಲ್ಲೇ 100 ಮಿಲಿಯನ್ ವೀಕ್ಷಣೆ ಕಂಡಿತು. ಈಗ ಹೊಸ ಟೀಸರ್ ಮತ್ತಷ್ಟು ಗಮನ ಸೆಳೆದಿದೆ.
For More Updates Join our WhatsApp Group :




