ನವದೆಹಲಿ: ದೆಹಲಿ-ಮೀರತ್ ಎಕ್ಸ್ಪ್ರೆಸ್ವೇನಲ್ಲಿ ಕಾರೊಂದು ವೇಗವಾಗಿ ಬಂದು ಟ್ರಾಫಿಕ್ ಪೊಲೀಸ್ಗೆ ಡಿಕ್ಕಿ ಹೊಡೆದಿರುವ ಭಯಾನಕ ವಿಡಿಯೋ ವೈರಲ್ ಆಗಿದೆ. ವೇಗವಾಗಿ ಬಂದ ಎರ್ಟಿಗಾ ಕಾರು ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಅಧಿಕಾರಿ ಸಾಕಷ್ಟು ದೂರ ಹೋಗಿ ಬಿದ್ದಿದ್ದರು.ನಿಯಂತ್ರಣ ತಪ್ಪಿದ ಕಾರು ಪೊಲೀಸರ ಮೇಲೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ .ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಇದ್ದಕ್ಕಿದ್ದಂತೆ ವೇಗವಾಗಿ ಬರುತ್ತಿದ್ದ ವಾಹನವು ತನ್ನ ಕಡೆಗೆ ಬರುತ್ತಿರುವುದನ್ನು ಗಮನಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಷ್ಟರೊಳಗೆ ಅವರಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದರೂ ಕಾರು ನಿಲ್ಲಲಿಲ್ಲ ವೇಗವಾಗಿಯೇ ಮುಂದಕ್ಕೆ ಹೋಗಿದೆ.ಅವರು ಪ್ರಸ್ತುತ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
For More Updates Join our WhatsApp Group :
