ಬಿಜೆಪಿಯಲ್ಲಿ ತ್ರಿಮೂರ್ತಿ ತಂತ್ರ: ಬೆಂಗಳೂರಲ್ಲಿ ಯೋಗಿ ಆದಿತ್ಯನಾಥ್ ಟಾರ್ಗೆಟ್ ಯಾರು!?

ಬೆಂಗಳೂರು: ಹಳೆ ಮೈಸೂರು ಭಾಗ, ಕರಾವಳಿಯಲ್ಲಿ ಯೋಗಿ ಅಸ್ತ್ರ ಸಿದ್ಧವಾಗುತ್ತಿದೆ. ಎರಡು ಭಾಗಗಳಲ್ಲಿ ಯೋಗಿ ರ‍್ಯಾಲಿಗಳನ್ನು ಫಿಕ್ಸ್ ಮಾಡಲು ಬಿಜೆಪಿ ಮೆಗಾ ಪ್ಲ್ಯಾನ್ ಮಾಡಿದೆ. ಜನವರಿ 29ಕ್ಕೆ ರಾಜಧಾನಿ ಬೆಂಗಳೂರಲ್ಲಿ ಯೋಗಿ ಆದಿತ್ಯನಾಥ್ ಅಬ್ಬರ ಜೋರಾಗಿದ್ದು, ಬಿಜೆಪಿಯಿಂದ (BJP) ಮೋದಿ, ಶಾ, ಯೋಗಿ ತಂತ್ರ ಕಾರ್ಯರೂಪಕ್ಕೆ ಬರುತ್ತಿದೆ.

ಅಂದಹಾಗೆ ವಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಎರಡು ಪ್ರವಾಸ ಫಿಕ್ಸ್ ಆಗಿದೆ. ಜನವರಿ 12ಕ್ಕೆ ಹುಬ್ಬಳ್ಳಿಗೆ, ಜನವರಿ 19ಕ್ಕೆ ನಾರಾಯಣಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಪ್ರಧಾನಿ ಪ್ರವಾಸದ ಬಳಿಕ ಮೂರನೇ ವಾರದಲ್ಲಿ ಅಮಿತ್ ಶಾ ಮತ್ತೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಆ ವೇಳೆ ಅಮಿತ್ ಶಾ (Amit Shah) ಸಂಘಟನಾ ಸಭೆಗಳ ಜೊತೆಗೆ ಟಾಸ್ಕ್ ಪ್ರಗತಿ ಬಗ್ಗೆ ವರದಿ ಪಡೆಯಲಿದ್ದಾರೆ. ಅಮಿತ್ ಶಾ ಪ್ರವಾಸದ ಬಳಿಕ ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಪ್ರವಾಸ ಫಿಕ್ಸ್ ಆಗಿದೆ.

ಬೆಂಗಳೂರಲ್ಲೇ (Bengaluru) ಯೋಗಿ ಆದಿತ್ಯನಾಥ್ (Yogi Adityanath) ಪ್ರವಾಸ ಫಿಕ್ಸ್ ಮಾಡಿ ನಗರವಾಸಿಗಳೇ ಬಿಜೆಪಿ ಟಾರ್ಗೆಟ್ ಎನ್ನಲಾಗುತ್ತಿದೆ. ಗೋವಿಂದರಾಜನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಗಿ ಆದಿತ್ಯನಾಥ್ ಮಾಗಡಿ ರಸ್ತೆಯಲ್ಲಿ ನಿರ್ಮಾಣ 300 ಹಾಸಿಗೆ ಸಾಮರ್ಥ್ಯವುಳ್ಳ ಮೇಲ್ದರ್ಜೆಗೇರಿಸಿದ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ.

ನಾಥ ಪರಂಪರೆಯ ಮಠಾಧೀಶರೂ ಆಗಿರುವ ಯೋಗಿ ಆದಿತ್ಯನಾಥ್ ಅವರ ಮೂಲಕ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಸೆಳೆಯುವ ಯತ್ನ ಎನ್ನಲಾಗುತ್ತಿದೆ.

ಈ ಹಿಂದೆ ಅಮಿತ್ ಶಾ ಪ್ರವಾಸದ ವೇಳೆ ಓಲ್ಡ್ ಮೈಸೂರು (Old Mysuru) ಟಾರ್ಗೆಟ್ ಆಗಿತ್ತು. ಹೆಚ್‌ಡಿಕೆ, ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿ ಮೈತ್ರಿ ಇಲ್ಲ ಎಂದಿದ್ದ ಅಮಿತ್ ಶಾ ಒಳ ಒಪ್ಪಂದ ಚರ್ಚೆಗೆ ಬ್ರೇಕ್ ಹಾಕಿದ್ದರು. ಹಾಗಾಗಿ ಈ ಸಲ ಯೋಗಿ ಪ್ರವಾಸದ ವೇಳೆ ಟಾರ್ಗೆಟ್ ಯಾರು? ಹಿಂದುತ್ವ+ ಒಕ್ಕಲಿಗ ಮತ ಸೆಳೆಯುವ ಪ್ಲ್ಯಾನ್ ಇದೆಯಾ? ಎಂಬ ಕುತೂಹಲ ಮನೆ ಮಾಡಿದೆ

Pragati TV Social Connect for more latest u

Leave a Reply

Your email address will not be published. Required fields are marked *