ಬಾತ್ರೂಮ್ ದುರ್ವಾಸನೆ ದೂರ ಮಾಡಲು ಈ ನೈಸರ್ಗಿಕ ಪರಿಹಾರಗಳನ್ನು ಟ್ರೈ ಮಾಡಿ.

ಬಾತ್ರೂಮ್ ದುರ್ವಾಸನೆ ದೂರ ಮಾಡಲು ಈ ನೈಸರ್ಗಿಕ ಪರಿಹಾರಗಳನ್ನು ಟ್ರೈ ಮಾಡಿ.

ಬಾತ್‌ರೂಮ್‌ ದುರ್ವಾಸನೆ ಬರದಂತೆ ನೋಡಿಕೊಳ್ಳಲು ಈ ಸಲಹೆ ಪಾಲಿಸಿ.

ಸ್ನಾನಗೃಹವು ಎಷ್ಟೇ ಸ್ವಚ್ಛವಾಗಿದ್ದರೂ,  ಪ್ರತಿನಿತ್ಯ ಸ್ವಚ್ಛಗೊಳಿಸಿದರೂ ಸಹ  ಕೆಲವೊಂದು ಬಾರಿ ಬಾತ್‌ರೂಮ್‌ನಿಂದ ದುರ್ವಾಸನೆ ಬರುತ್ತದೆ. ಈ ಕೆಟ್ಟ ವಾಸನೆ ಅನಾನುಕೂಲವನ್ನುಂಟುಮಾಡುವುದಲ್ಲದೆ, ಅತಿಥಿಗಳ ಮುಂದೆ ಮುಜುಗರವನ್ನುಂಟು ಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ತೊಡೆದುಹಾಕಲು ಹೆಚ್ಚಿನವರು ಫಿನೈಲ್, ರೂಮ್ ಫ್ರೆಶ್ನರ್‌ಗಳು ಅಥವಾ ಪರಿಮಳಯುಕ್ತ ಕ್ಲೀನರ್‌ಗಳ ಮೊರೆ ಹೋಗ್ತಾರೆ. ಆದರೆ ಇವು ವಾಸನೆಯನ್ನು ತಾತ್ಕಾಲಿಕವಾಗಿ ಮಾತ್ರ ನಿವಾರಿಸುತ್ತವೆ. ಹೀಗಿರುವಾಗ ಈ ಸಮಸ್ಯೆಯಿಂದ ಶಾಶ್ವತ ಪರಿಹಾರವನ್ನು ಪಡೆಯಲು ಈ ಕೆಲವೊಂದಿಷ್ಟು ನೈಸರ್ಗಿಕ ಉತ್ಪನ್ನಗಳನ್ನು ಬಳಸಿ.

ಬಾತ್‌ರೂಮ್‌ ದುರ್ವಾಸನೆ ಬರದಂತೆ ನೋಡಿಕೊಳ್ಳಲು ಈ ಸಲಹೆ ಪಾಲಿಸಿ:

ಅಡಿಗೆ ಸೋಡಾ ಬಳಕೆ: ಅಡುಗೆ ಸೋಡಾ ನೈಸರ್ಗಿಕ ವಾಸನೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಹಾಗಾಗಿ ಬಾತ್‌ರೂಮ್‌ ಸ್ವಚ್ಛಗೊಳಿಸುವಂತಹ ಸಂದರ್ಭದಲ್ಲಿ ಸ್ವಲ್ಪ ಅಡುಗೆ ಸೋಡಾವನ್ನು ಸೇರಿಸಿ. ಇದು ವಾಸನೆಯನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ.

ಬಿಳಿ ವಿನೆಗರ್ಬಳಕೆ: ಬತ್‌ರೂಮ್‌ ಎಷ್ಟೇ ಕ್ಲೀನ್‌ ಆಗಿ ಇಟ್ಟುಕೊಂಡರೂ ವಾಸನೆ ಬರುತ್ತಿದೆ ಎಂದಾದ್ರೆ ಸ್ನಾನಗೃಹ ಸ್ವಚ್ಛಗೊಳಿಸುವ ನೀರಿಗೆ ಸ್ವಲ್ಪ ಬಿಳಿ ವಿನೆಗರ್‌ ಸೇರಿಸಿ. ಇದು ಸ್ನಾನಗೃಹದಲ್ಲಿನ ವಾಸನೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಪುದೀನಾ ಎಣ್ಣೆ: ಪುದೀನಾ ಎಣ್ಣೆ ಸ್ನಾನಗೃಹದಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಬಾತ್‌ರೂಮ್‌ ಸ್ವಚ್ಛಗೊಳಿಸಿದ ಬಳಿಕ ಕೆಮಿಕಲ್‌ಯುಕ್ತ ಸ್ಪ್ರೇಗಳನ್ನು ಬಳಸುವ ಬದಲು ಬಾತ್‌ರೂಮ್‌ಗೆ ಸ್ವಲ್ಪ ಪುದೀನಾ ಎಣ್ಣೆಯನ್ನು ಸಿಂಪಡಿಸಿ.

ಲ್ಯಾವೆಂಡರ್ಎಣ್ಣೆ: ಬಾತ್‌ರೂಮ್‌ ಸ್ವಚ್ಛಗೊಳಿಸಿದ ಬಳಿಕವೂ ವಾಸನೆ ಬರುವುದು ಮಾತ್ರ ನಿಲ್ಲುತ್ತಿಲ್ಲವೆಂದಾದರೆ ಬಾತ್‌ರೂಮ್‌ ಕ್ಲೀನ್‌ ಮಾಡಿದ ನಂತರ ಸ್ನಾನಗೃಹದ ಮೂಲೆಗಳಿಗೆ ಲ್ಯಾವೆಂಡರ್‌ ಎಣ್ಣೆಯನ್ನು ಹಚ್ಚಿ. ಅಲ್ಲದೆ ನೀವು ಲ್ಯಾವೆಂಡರ್‌ ಡಿಫ್ಯೂಸರ್‌ ಬಳಸುವುದರಿಂದಲೂ ಸ್ನಾನಗೃಹದ ವಾಸನೆಯನ್ನು ನಿವಾರಿಸಬಹುದು.

ನಿಂಬೆರಸದ ಬಳಕೆ: ನಿಂಬೆರಸದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸ್ನಾನಗೃಹದಿಂದ ಬರುವ ಕೆಟ್ಟ ವಾಸನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಸ್ನಾನಗೃಹದ ಮೂಲೆಗಳಲ್ಲಿ ನಿಂಬೆ ಹೋಳನ್ನು ಇಡಬಹುದು. ಇಲ್ಲದಿದ್ದರೆ ನಿಂಬೆ ರಸವನ್ನು ಬಳಸಿ ಸ್ನಾನಗೃಹವನ್ನು ಸ್ವಚ್ಛಗೊಳಿಸಬಹುದು.

ಕಾಫಿ ಬೀಜಗಳ ಬಳಕೆ: ಕಾಫಿ ಬೀಜಗಳ ಸುವಾಸನೆಯು ಸಾಕಷ್ಟು ವಿಶಿಷ್ಟ ಮತ್ತು ಆಹ್ಲಾದಕರವಾಗಿರುತ್ತದೆ. ಹಾಗಾಗಿ ಸ್ನಾನಗೃಹದ ಕೆಟ್ಟ ವಾಸನೆಯನ್ನು ತೊಡೆದುಹಾಕಲು ನೀವು ಅವುಗಳನ್ನು ಬಳಸಬಹುದು. ಇದನ್ನು ಮಾಡಲು, ಒಂದು ಬೌಲ್‌ಗೆ ನೀರನ್ನು ತುಂಬಿಸಿ ಅದಕ್ಕೆ ಕಾಫಿ ಬೀಜಗಳನ್ನು ಸೇರಿಸಿ ಇದನ್ನು ಸ್ನಾನಗೃಹದಲ್ಲಿ ಇರಿಸಿ. ಇದು ಬಾತ್‌ರೂಮ್‌ಗೆ ಆಹ್ಲಾದಕರ ಸುವಾಸನೆಯನ್ನು ನೀಡುತ್ತದೆ.

ಎಕ್ಸಾಸ್ಟರ್ಫ್ಯಾನ್ಬಳಕೆ: ಸ್ನಾನಗೃಹದಲ್ಲಿ ಎಕ್ಸಾಸ್ಟ್‌ ಫ್ಯಾನ್‌ ಇರುವುದನ್ನು ಖಚಿತಪಡಿಸಿಕೊಳ್ಳಿ. ಇದು ಗಾಳಿಯ ಪ್ರಸರಣವನ್ನು ಉತ್ತಮಗೊಳಿಸುತ್ತದೆ ಮತ್ತು ಸ್ನಾನಗೃಹವು ಕೆಟ್ಟ ವಾಸನೆ ಬರದಂತೆ ತಡೆಯುತ್ತದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *