Tumkur | ದಲಿತರಿಗೆ ಒಳ ಮೀಸಲಾತಿ : ಸಚಿವ ಕೆಎನ್‌ಆರ್‌ಗೆ ಮನವಿ

ಮಧುಗಿರಿ : ನ್ಯಾಯಮೂರ್ತಿ ಎ.ಜೆ ಸದಾಶಿವ ಹಾಗೂ ಕಾಂತರಾಜು ರವರುಗಳ ವರದಿಗಳ ಅನುಷ್ಠಾನದಲ್ಲಿ ದಲಿತರಿಗೆ ಒಳ ಮೀಸಲಾತಿಯ ಮೂಲಭೂತ ಹಕ್ಕುಗಳನ್ನು ಜಾರಿ ಮಾಡಲು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚಿಸುವಂತೆ ಆಗ್ರಹಿಸಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ನವರಿಗೆ ದಲಿತ ಪರ ಸಂಘಟನೆಗಳ ಮುಖಂಡರು ಮನವಿ ಪತ್ರ ಸಲ್ಲಿಸಿದರು.

ಯುವಕ

ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹೆಚ್ಚಿಸಿ, ಒಂದರಿ0ದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ನೀಡುತ್ತಿರುವ ಶಿಷ್ಯ ವೇತನವನ್ನು ರೂ. 2000 ವರೆಗೆ ಹೆಚ್ಚಿಸಬೇಕು. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಭೋಜನ ವೆಚ್ಚ ನಾಲ್ಕು ಸಾವಿರಕ್ಕೆ ಹೆಚ್ಚಿಸಬೇಕು.

ದಲಿತ ಹೋರಾಟಗಾರರಿಗೆ ಭೂಮಿ ನಿವೇಶನ ವಸತಿಗಳನ್ನು ನಗರ ಪ್ರದೇಶದಲ್ಲಿ ಸರ್ಕಾರದ ವತಿಯಿಂದ ಕಲ್ಪಿಸಿಕೊಡಬೇಕೆಂದು ದಲಿತ ಪರ ಸಂಘಟನೆಗಳು ಮನವಿ ಪತ್ರದಲ್ಲಿ ಹಕ್ಕೊತ್ತಾಯ ಮಾಡಿದ್ದಾರೆ. ದಲಿತ ಪರ ಸಂಘಟನೆಗಳ ಮುಖಂಡರುಗಳಾದ ದೊಡ್ಡೇರಿ ಕಣಿಮಯ್ಯ, ಸಣ್ಣರಾಮಣ್ಣ, ಪಾಂಡುರ0ಗಯ್ಯ, ನರಸೀಯಪ್ಪ, ಜಿ.ಎನ್.ಆಂಜಿನಪ್ಪ, ಪುಟ್ಟಸಿದ್ದಪ್ಪ, ನಾಗೇಶ್, ಕೆ.ಶಿವಣ್ಣ, ಕೃಷ್ಣಪ್ಪ, ಎಂ ನಾಗರಾಜು ಮತ್ತಿತರರು ಇದ್ದರು.

Pragati TV Social Connect for more latest u

Leave a Reply

Your email address will not be published. Required fields are marked *