ಹಾಲು ಖರೀದಿ ದರ 2 ರೂ ಕಡಿಮೆ ಮಾಡಿದ ತುಮಕೂರು ಸಹಕಾರಿ ಹಾಲು ಒಕ್ಕೂಟ

ತುಮಕೂರು : ತುಮಕೂರು ಸಹಕಾರಿ ಹಾಲು ಒಕ್ಕೂಟದಲ್ಲಿ ಮೇ-2021ರ ಮಾಹೆಯ ದಿನವಹಿ ಹಾಲು ಶೇಖರಣೆ ಸರಾಸರಿ 8.19 ಲಕ್ಷ ಲೀಟರ್ ಇದ್ದು, ಪ್ರಸ್ತುತ ಒಕ್ಕೂಟದ ದಿನವಹಿ ಹಾಲು ಶೇಖರಣೆ 8.65 ಲಕ್ಷ ಕೆ.ಜಿ.ಗಳಷ್ಟಾಗಿದೆ. ಪ್ರತಿನಿತ್ಯ 4.46 ಲಕ್ಷ ಕೆ.ಜಿ ಹಾಲನ್ನು ನೇರವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಾಗಿ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚುವರಿಯಾದ 4.19 ಲಕ್ಷ ಕೆ.ಜಿ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಯಾಗಿ ಪರಿವರ್ತಿಸಲಾಗುತ್ತಿದೆ.

ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯ ೨ನೇ ಅಲೆಯ ಹಿನ್ನೆಲೆಯಲ್ಲಿ ದಿನಾಂಕ 24.04.2021 ರಿಂದ 14.06..2021 ರವರೆಗೂ ಸರ್ಕಾರವು ಲಾಕ್‌ಡೌನ್ ಘೋಷಿಸಿದ್ದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕುಂಠಿತಗೊಂಡು ಪ್ರಸ್ತುತ 80 ರೂ. ಕೋಟಿ ಮೌಲ್ಯದ 2200 ಮೆಟ್ರಿಕ್ ಟನ್ ಹಾಲಿನಪುಡಿ ಹಾಗೂ 1500 ಮೆಟ್ರಿಕ್ ಟನ್ ಬೆಣ್ಣೆ ಮಾರಾಟವಾಗದೇ ಉಳಿದುಕೊಂಡಿದ್ದು, ಏಪ್ರಿಲ್-2021 ಹಾಗೂ ಮೇ-2021 ರ ಮಾಹೆಯಲ್ಲಿ ಸಂಸ್ಥೆಗೆ‌ 19 ಕೋಟಿ ರೂ. ನಷ್ಠವುಂಟಾಗಿರುವುರಿಂದ ಹೆಚ್ಚುವರಿ ಹಾಲನ್ನು ಪುಡಿಯಾಗಿ ಪರಿವರ್ತಿಸಲು ತಗಲುವ ಸಾಗಾಣಿಕೆ, ಪರಿವರ್ತನಾ ಮತ್ತು ದಾಸ್ತಾನು ವೆಚ್ಚ ಒಕ್ಕೂಟಕ್ಕೆ ಹೊರೆಯಾಗುತ್ತಿರುವುದನ್ನು ಪರಿಗಣಿಸಿ ದಿನಾಂಕ 07.06.2021 ರಂದು ನಡೆದ ಆಡಳಿತ ಮಂಡಲಿ ಸಭೆಯಲ್ಲಿ ಈ ಬಗ್ಗೆ ವಿವರವಾಗಿ ಚರ್ಚಿಸಿ ದಿನಾಂಕ 08.06.2021 ರಿಂದ ಅನ್ವಯವಾಗುವಂತೆ ಹಾಲಿನ ಖರೀದಿ ದರವನ್ನು ಲೀಟರ್ ಒಂದಕ್ಕೆ 2/- ರೂ. ಕಡಿಮೆ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.

ಆದ್ದರಿಂದ ದಿನಾಂಕ 08.06.2021 ರಿಂದ ಅನ್ವಯಿಸುವಂತೆ ಸಂಘಗಳಿಂದ ಖರೀದಿಸುವ ಶೇ 3.5 ಜಿಡ್ಡಿನಾಂಶ ಹಾಗೂ ಶೇ 8.50 ಎಸ್.ಎನ್.ಎಫ್. ಗುಣಮಟ್ಟದ ಪ್ರತಿ ಕೆ.ಜಿ. ಹಾಲಿಗೆ ರೂ.25.93 ಮತ್ತು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.25/- ಗಳಂತೆ ನಿಗದಿಪಡಿಸಲಾಗಿದೆ. ಪ್ರಸ್ತುತ ಒಕ್ಕೂಟದಲ್ಲಿ ಶೇಖರಣೆಯಾಗುತ್ತಿರುವ ಶೇ 8.50 ಎಸ್.ಎನ್.ಎಫ್ ಗುಣಮಟ್ಟ ಇರುವ ಹಾಲಿನ ಪ್ರಮಾಣ ಶೇ 90 ಇದ್ದು ದಿನಾಂಕ 08.06.2021 ರಿಂದ ಸಂಘಗಳಿಂದ ಒಕ್ಕೂಟ ಖರೀದಿಸುವ ಶೇ 4.1 ಜಿಡ್ಡಿನ ಪ್ರತಿ ಕೆಜಿ ಹಾಲಿಗೆ ರೂ.27.22 ಹಾಗೂ ಉತ್ಪಾದಕರಿಂದ ಸಂಘಕ್ಕೆ ಖರೀದಿಸುವ ಶೇ 4.1 ಜಿಡ್ಡಿನ ಪ್ರತಿ ಲೀಟರ್ ಹಾಲಿಗೆ ರೂ.26.99 ದರ ನಿಗದಿಪಡಿಸಿದೆ.

ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ನಿಂದ ಸಂಘದ ಸದಸ್ಯರು / ಸಿಬ್ಬಂದಿ ಸಹಜ ಮರಣ ಹೊಂದಿದಲ್ಲಿ 50000/- ರೂ. ಮರಣ ಪರಿಹಾರ ಧನ ನೀಡುತ್ತಿದ್ದು, ಕೋವಿಡ್-19 ರ ಕಾಯಿಲೆಯಿಂದಾಗಿ ಮರಣ ಹೊಂದಿದ ಸಂಘದ ಸದಸ್ಯರು / ಸಿಬ್ಬಂದಿಗೆ 1 ಲಕ್ಷ ರೂ. ಮರಣ ಪರಿಹಾರ ಧನ ನೀಡಲು ತೀರ್ಮಾನಿಸಲಾಗಿದೆ. ಒಕ್ಕೂಟದ 2770 ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮಾಸ್ಕ್, ಫೇಸ್ ಶೀಲ್ಡ್ ಹಾಗೂ ಸ್ಯಾನಿಟೈಸರ್ ಗಳನ್ನು ಉಚಿತವಾಗಿ ನೀಡಲಾಗಿದೆ.

ಜಿಲ್ಲೆಯ ಹಾಲು ಉತ್ಪಾದಕರು ಎಂದಿನಂತೆ ಸರ್ಕಾರ ಸೂಚಿಸಿರುವ ಕೋವಿಡ್ ನಿಯಮ / ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಸಂಘಗಳಿಗೆ ಹಾಲು ಹಾಕಲು ಒಕ್ಕೂಟದ ಅಧ್ಯಕ್ಷ‌ ಸಿ.ವಿ.ಮಹಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *