ತುಮಕೂರು: ಪೋಕ್ಸೋ ಕೇಸ್ ದಾಖಲಿಸಿಕೊಂಡು ತಡರಾತ್ರಿ ಪೊಲೀಸರು ಬಾಲಮಂಜುನಾಥ್ ಸ್ವಾಮೀಜಿಯನ್ನು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷರಾಗಿದ್ದ ಬಾಲಮಂಜುನಾಥ್ ಸ್ವಾಮೀಜಿ ಬಂಧಿತರಾಗಿದ್ದಾರೆ.

ಚರ್ಮ ರೋಗಕ್ಕೆ ಚಿಕಿತ್ಸೆ ಕೊಡುವ ನೆಪದಲ್ಲಿ ನನ್ನ ಬೆತ್ತಲೆ ವಿಡಿಯೋ ಮಾಡಿಕೊಂಡು, ನನ್ನನ್ನು ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆಂದು ಕಳೆದ ಫೆಬ್ರುವರಿ 10 ರಂದು ತುಮಕೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಸ್ವಾಮೀಜಿ.

ಸ್ವಾಮೀಜಿಯ ಆಪ್ತ ಸಹಾಯಕ ಅಭಿಲಾಷ್ ಎಂಬಾತನಿಂದ ಎಫ್ಐಆರ್ ದಾಖಲು ಮಾಡಿದ್ದರು ಸ್ವಾಮೀಜಿ.

ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ಸ್ವಾಮೀಜಿ ಕಡೆಯಿಂದಲೇ ಕೆಲವರ ವಿರುದ್ಧ ದೂರು ದಾಖಲಾಗಿತ್ತು. ಆದರೆ, ಅದೇ ಆರೋಪಿಗಳು ಸ್ವಾಮೀಜಿಯವರ ಬೇರೊಂದು ಹಗರಣವೊಂದನ್ನು ವಿಚಾರಣೆ ವೇಳೆ ಬಯಲು ಮಾಡಿದ್ದಾರೆ. ಹಾಗಾಗಿ, ಪೊಲೀಸರು ಸ್ವಾಮೀಜಿಯವರನ್ನು ಬಂಧಿಸಿದ್ದಾರೆಂದು ಹೇಳಲಾಗಿದೆ. ಅಂದರೆ, ದೂರು ಕೊಟ್ಟ ಸ್ವಾಮೀಜಿಯೇ ಈಗ ಬೇರೊಂದು ಕೇಸ್ ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಸ್ವಾಮೀಜಿಯ ಸೇವಕ ಅಭಿಷೇಕ್ ಅಂಡ್ ಟೀಂ ನಿಂದ ಬೆದರಿಕೆ ಹಾಕಿ ಹಣಕ್ಕೆ ಡಿಮ್ಯಾಂಡ್ ಇಡಲಾಗಿದೆ ಎಂಬ ದೂರಿನ ಅನ್ವಯ ಅವರನ್ನು ವಿಚಾರಣೆ ನಡೆಸಿದಾಗ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ.

ಮಠದಲ್ಲೇ ಅಪ್ರಾಪ್ತ ಬಾಲಕಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ಕೊಟ್ಟಿರುವ ಬಗ್ಗೆ ಅಭಿಷೇಕ್ ಕೊಟ್ಟ ಮಾಹಿತಿ ಮೇರೆಗೆ ತಡರಾತ್ರಿ ಮಠಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು.

ಪರಿಶೀಲನೆ ವೇಳೆ ಸ್ವಾಮೀಜಿಯ ಅಸಲಿ ಮುಖವಾಡ ಬಯಲಾಗಿದ್ದು,
ಬಾಲಮಂಜುನಾಥ್ ಸ್ವಾಮೀಜಿ ವಿರುದ್ಧ ಪೋಕ್ಸೋ ಕೇಸ್ ದಾಖಲು ಮಾಡಿ ಸ್ವಾಮೀಜಿ‌ ಬಂಧಿಸಲಾಗಿದೆ.

ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ತಡರಾತ್ರಿ ಸ್ವಾಮೀಜಿ ಆಪ್ತ ಹಾಗೂ ಸ್ವಾಮೀಜಿ ಇಬ್ಬರನ್ನು ಬಂಧಿಸಿದ ಪೊಲೀಸಿದ್ದಾರೆ.

ತುಮಕೂರು ಎಸ್ ಪಿ ಅಶೋಕ್ ಕೆವಿ ನೇತೃತ್ವದಲ್ಲಿ ಬಂಧಿಸಲಾಗಿದ್ದು, ಪೊಲೀಸರಿಂದ ತನಿಖೆ‌ ಮುಂದುವರೆದಿದೆ.

ಅಭಿಷೇಕ್ ಮೇಲೆ ಸ್ವಾಮೀಜಿ ದೂರು ಕೊಟ್ಟಿದ್ಯಾಕೆ?
ಕೆಲವು ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ, ಸ್ವಾಮೀಜಿಯವರಿಗೆ ಬಹಿರಂಗವಾಗಿ ಹೇಳಿಕೊಳ್ಳದ ಜಾಗದಲ್ಲಿ ಚರ್ಮರೋಗದ ಸಮಸ್ಯೆಯಿತ್ತು. ಅದನ್ನು ಅವರು ತಮ್ಮ ಆಪ್ತರಾಗಿದ್ದ ಅಭಿಷೇಕ್ ಬಳಿ ಹೇಳಿಕೊಂಡಿದ್ದರು. ಹಾಗಾಗಿ ಅಭಿಷೇಕ್, ಚರ್ಮ ರೋಗದ ವೈದ್ಯರೆಂದು ತಮಗೆ ಪರಿಚಯಸ್ಥರೆಂದು ಹೇಳಿ ಒಬ್ಬ ಮಹಿಳೆಯರನ್ನು ಭೇಟಿ ಮಾಡಿಸಿದ್ದರು. ಆದರೆ, ನೇರವಾಗಿ ಆ ಮಹಿಳೆಗೆ ಗೌಪ್ಯ ಜಾಗದಲ್ಲಿರುವ ತಮ್ಮ ಚರ್ಮದ ವ್ಯಾಧಿಯನ್ನು ತೋರಿಸಲು ಸ್ವಾಮೀಜಿಗೆ ಇಷ್ಟವಾಗಿರಲಿಲ್ಲ. ಹಾಗಾಗಿ, ಚರ್ಮರೋಗವಿರುವ ಜಾಗದ ಫೋಟೋ ತೆಗೆದು ಯುವತಿಯ ಮೊಬೈಲಿಗೆ ಕಳುಹಿಸಲಾಗಿತ್ತು. ಆನಂತರ, ವ್ಯಾಧಿಯ ಬಗ್ಗೆ ವೈದ್ಯರ ಬಳಿ ಹೇಳಿಕೊಳ್ಳಲು ಸ್ವಾಮೀಜಿಗೆ ವಿಡಿಯೋ ಕಾಲ್ ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆಗ, ಸ್ವಾಮೀಜಿಯವರು ಚರ್ಮ ವ್ಯಾಧಿಯಿರುವ ಜಾಗವನ್ನು ತೋರಿಸಿದ್ದರು. ಈ ವಿಡಿಯೋ ಕಾಲ್ ಅನ್ನೇ ರೆಕಾರ್ಡ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ದೂರು ನೀಡಿದ್ದರು.

Leave a Reply

Your email address will not be published. Required fields are marked *